ಮಂಗಳೂರು: ತುಲುವೆರೆ ಕಲ ವರ್ಸೊಚ್ಚಯ, ಕಲತ ಮಸ್ತಿರೆ ಬಿಡುಗಡೆ ಕಾರ್ಯಕ್ರಮವು ಮಂಗಳೂರುನ ಕೊಡಿಯಾಲ್ ಬೈಲಿನ ಶಾರದಾ ವಿದ್ಯಾಲಯದಲ್ಲಿ ಮೇ 1ರಂದು ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಶಾರದಾ ವಿದ್ಯಾಲಯ ಮಂಗಳೂರು ಇದರ ಪ್ರಾಂಶುಪಾಲ ದಯಾನಂದ ಕಟೀಲ್ ಮಾಡಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ತುಲುವೆರ ಕಲದ ಅಧ್ಯಕ್ಷೆ ಗೀತಾ ಲಕ್ಷ್ಮೀಶ್ ವಹಿಸಲಿದ್ದಾರೆ.
ಖ್ಯಾತ ನಿರೂಪಕರು, ಸಂಘಟಕರು ಕದ್ರಿ ನವನೀತ್ ಶೆಟ್ಟಿ ಯೂಟ್ಯೂಬ್ ಲೋಕಾರ್ಪಣೆ ಮಾಡಲಿದ್ದಾರೆ. ಸಾಹಿತಿ ಕಾ. ವಿ. ಕೃಷ್ಣದಾಸ್ ಮತ್ತು ನಿರೂಪಕ ರಾಜೇಂದ್ರ ಪ್ರಸಾದ್ ಎಕ್ಕಾರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ಸಂಧರ್ಭದಲ್ಲಿ ಬೊಲ್ಲಿದಾರಗೆ, ಉದಿಪು, ಉಪ್ಪರಿಗೆ, ತುಡರ್, ಕೇಪುಲ, ಪುಂಡಿಕಾಣಿಕೆ ಕೃತಿಗಳ ಬಿಡುಗಡೆಯಾಗಲಿದೆ. ವಿಜಯಲಕ್ಷ್ಮಿ ಕಟೀಲ್ , ಡಾ ಮೀನಾಕ್ಷಿ ರಾಮಚಂದ್ರ , ರಾಜಶ್ರೀ ಟಿ. ರೈ ಪೆರ್ಲ , ವೀಣಾ ಟಿ. ಶೆಟ್ಟಿ , ರಘು ಇಡ್ಕಿದು , ಅಕ್ಷಯ ಆರ್. ಶೆಟ್ಟಿ ಕೃತಿ ಬಿಡುಗೆಡೆಗೊಳಿಸಿ ಪರಿಚಯಿಸಲಿದ್ದಾರೆ. ಉಪನ್ಯಾಸ ಮತ್ತು ಪಾತೆರಕತೆ ಕಾರ್ಯಕ್ರಮದಲ್ಲಿ ಮುದ್ದು ಮೂಡುಬೆಳ್ಳೆ ಅವರಿಂದ ತುಳು ಸಾಹಿತ್ಯದ ಬುಲೆಚ್ಚಿಲ್ ದ ತಾದಿ ಆನಿ-ಇನಿ-ನನ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಟೈಮ್ಸ್ ಆಫ್ ಕುಡ್ಲ, ತುಳುನಾಡು ಧ್ವನಿ, ತುಳುನಾಡು ವಾರ್ತೆ, ಪೂವರಿ, ಪಿಂಗಾರ ಮುಂತಾದ ಪತ್ರಿಕೆಗಳಿಗೆ ತುಳು ಪತ್ರಿಕಾ ಮಾಧ್ಯಮ-ಕಲತ ಮಾನಾದಿಗೆ ಸಲ್ಲಿಕೆಯಾಗಲಿದೆ. ಹರಿಣಿ ಎಂ. ಶೆಟ್ಟಿ, ದಿವ್ಯ ಅಂಚನ್ ಪಕ್ಷಿಕೆರೆ, ಪದ್ಮನಾಭ ಪೂಜಾರಿ ನೇರಂಬೋಳ್ ಇವರಿಗೆ ಕಲತ ಬೊಲ್ಲಿ – ಮೋಕೆದ ತಮ್ಮನ ನಡೆಯಲಿದೆ. ತುಲುವೆರೆ ಕಲತ ಪದುಕೆರೆನ ಚಾತುರ್ಪು ತೂಪರಿಕೆ – ಪದರಂಗಿತ ಮಿನದನ ನಡೆಯಲಿದೆ. ಹಿರಿಯ ಸಾಹಿತಿ ಸದಾನಂದ ನಾರಾವಿ ಇವರಿಂದ ಮುಗಿತಲದ ಮದಿಪು ನಡೆಯಲಿದೆ. ಅಮೃತ ತುಲು ಚಿಟ್ಕ ಕಬಿಕೂಟದಲ್ಲಿ ತುಳುನಾಡಿನ ಅನೇಕ ಪ್ರತಿಭಾನ್ವಿತ ಕವಿಗಳು ಪಾಲ್ಗೊಳ್ಳಲಿದ್ದಾರೆ.