ಮಂಗಳೂರು: ಕನ್ನಡ ನಾಡಿನಲ್ಲಿ ಕನ್ನಡ ಭಾಷೆ ಕಡ್ಡಾಯ ಎಂಬ ಮುಖ್ಯಮಂತ್ರಿ ಆದೇಶದ ನಂತರ  ತುಳುನಾಡಿನಲ್ಲಿ ತುಳು ಭಾಷೆಯನ್ನು ಮತ್ತು ಕೊಡವ ನಾಡಿನಲ್ಲಿ ಕೊಡವ ಭಾಷೆಯನ್ನು ಶಿಕ್ಷಣ ಮತ್ತು ಆಡಳಿತದಲ್ಲಿ  ಕಡ್ಡಾಯಗೊಳಿಸಬೇಕೆಂದು ತುಳುವೆರೆ ಪಕ್ಷವು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿಯವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

 ಪಾರಂಪರಿಕ ವಿಶಾಲ ತುಳುನಾಡಿನಲ್ಲಿ ತುಳು ಭಾಷೆಯು ಸರ್ವ ಜನಾಂಗದ ಭಾಷೆಯಾಗಿದ್ದು ಸರಕಾರಗಳ ನಿರಂತರ ಅಸಡ್ಡೆಯಿಂದ ಭಾಷೆಯ ಉಳಿವಿನ ಬಗ್ಗೆ ಆತಂಕ ಎದುರಾಗಿ. ಕೇರಳಕ್ಕೆ ಹಂಚಿ ಹೋದ ದಕ್ಷಿಣ ತುಳುನಾಡನ್ನು ಹೊರತುಪಡಿಸಿ ಕರ್ನಾಟಕದಲ್ಲಿ ಹಂಚಿಕೆಯಾಗಿರುವ ಉಳಿದ ತುಳುನಾಡಿನಲ್ಲಿ ತುಳು ಭಾಷೆಯನ್ನು ಆಡಳಿತ ಮತ್ತು ಶಿಕ್ಷಣದಲ್ಲಿ ಕಡ್ಡಾಯಗೊಳಿಸಬೇಕು. ಕನ್ನಡನಾಡಿನಲ್ಲಿ ಕನ್ನಡ ಕಡ್ಡಾಯಗೊಳಿಸುವುದಕ್ಕೆ ನಮ್ಮ ಯಾವುದೇ ಅಭ್ಯಂತರವಿಲ್ಲ. ಆದರೆ ತುಳುನಾಡಿನಲ್ಲಿ ಕನ್ನಡ ಭಾಷೆಯ ಹೇರಿಕೆ ಸರಿಯಾದುದಲ್ಲ. ತುಳುನಾಡು ಮತ್ತು ಕೊಡವ ನಾಡಿನಲ್ಲಿ ಕನ್ನಡ ಹೇರಿಕೆಯನ್ನು  ಹಾಗೂ ಕೊಡವ ನಾಡಿನಲ್ಲಿ ಕೊಡವ ಭಾಷೆಯನ್ನು ಶಿಕ್ಷಣ ಮತ್ತು ಆಡಳಿತದಲ್ಲಿ ಜಾರಿಗೆ ತರಬೇಕುಎಂದು ತಿಳಿಸಿದ್ದಾರೆ.

ಭಾರತ ದೇಶದ ಆರ್ಟಿಕಲ್ 345ರ ಅಡಿಯಲ್ಲಿ ತುಳು ಭಾಷೆಗೆ ( ದಕ್ಷಿಣ ಕನ್ನಡ, ಉಡುಪಿ ಮತ್ತು ಮಲೆನಾಡಿನ ತುಳುಭಾಷಿಕ ಪ್ರದೇಶಗಳಿಗೆ ಅನ್ವಯವಾಗುವಂತೆ) ಮತ್ತು ಕೊಡವ ಭಾಷೆಗೆ (ಕೊಡಗು ಜಿಲ್ಲೆಗೆ ಅನ್ವಯವಾಗುವಂತೆ) ರಾಜ್ಯ ಭಾಷೆಯ ಸ್ಥಾನಮಾನ ಒದಗಿಸಬೇಕೆಂದು ತುಳುವೆರೆ ಪಕ್ಷದ ಅಧ್ಯಕ್ಷರಾದ ಶೈಲೇಶ್ ಆರ್.‌ ಜೆ. ತಿಳಿಸಿದ್ದಾರೆ.