ವಿಜಯನಗರ: ತುಂಗಭದ್ರಾ ಅಣೆಕಟ್ಟಿನ ಗೇಟು ಮುರಿದು ಹೋಗಿ ಅಣೆಕಟ್ಟು ಅಪಾಯದಲ್ಲಿದೆ. ಕಳೆದ ಮೂರು ದಿನಗಳಿಂದ ದಿನಕ್ಕೆ 1 ಲಕ್ಷ ಕ್ಯುಸೆಕ್ ನೀರು ನದಿಗೆ ಹರಿದು ಪೋಲಾಗುತ್ತಿದೆ. ಹೀಗಾಗಿ ರೈತರು ಆತಂಕಕ್ಕೀಡಾಗಿದ್ದಾರೆ. ಹೀಗಾಗಿ ಗೇಟ್ ಸರಿಪಡಿಸಲು ಆಂಧ್ರಪ್ರದೇಶದಿಂದ ಹಿರಿಯ ತಜ್ಞ ಕನ್ನಯ್ಯ ನಾಯ್ಡು ಬಂದಿದ್ದಾರೆ.
ಒಂದೇ ಬಾರಿ ಇಷ್ಟೊಂದು ದೊಡ್ಡ ಪ್ರಮಾಣದ ನೀರು ನಿಲ್ಲಿಸೋದು ಕಷ್ಟ. 48 ಟನ್ ಭಾರದ ಗೇಟ್ ಒಂದೇ ಬಾರಿ ಇಳಿಸೋದು ಕಷ್ಟ. ಐವತ್ತು ಟನ್ ಭಾರದ ಐದು ಪೀಸ್ ಕಬ್ಬಿಣ ಗೇಟ್ ಒಂದೊಂದಾಗಿ ಇಳಿಸುತ್ತೇವೆ. ಮೂರು ನಾಲ್ಕು ಕಡೆ ಗೇಟ್ ನಿರ್ಮಾಣವಾಗುತ್ತಿದೆ. ನಾಳೆಯಿಂದ ಒಂದೊಂದೇ ಪೀಸ್ಗಳನ್ನು ಹಾಕುತ್ತೇವೆ ಎಂದು ಕನ್ನಯ್ಯ ನಾಯ್ಡು ಹೇಳಿದ್ದಾರೆ.
ಭಗವಂತನ ಮೇಲೆ ಭಾರ ಹಾಕಿ ಕೆಲಸ ಪ್ರಾರಂಭಿಸುತ್ತೇವೆ. ನೀರು ಉಳಿಸುವ ಎಲ್ಲಾ ಪ್ರಯತ್ನ ಮಾಡುತ್ತೇವೆ. ಗೇಟ್ ಆಯಸ್ಸು 40 ವರ್ಷ ಇರುತ್ತದೆ. ಇದೀಗ ಅಣೆಕಟ್ಟಿಗೆ 70 ವರ್ಷವಾಗಿದೆ. ಎಲ್ಲಾ ರೀತಿಯ ನಿರ್ವಹಣೆ ಮಾಡಿದ್ದೇವೆ. ಹೊಸ ಪ್ರಯತ್ನ ಮಾಡಿ ನೀರು ನಿಲ್ಲಿಸುತ್ತೇವೆ. ಇದು ತಾತ್ಕಾಲಿಕ ಕೆಲಸ. ನೀರು ಕಡಿಮೆಯಾದ ಬಳಿಕ ಮತ್ತೊಮ್ಮೆ ಗೇಟ್ ಕೂರಿಸಬೇಕು ಎಂದು ಅವರು ಹೇಳಿದ್ದಾರೆ.