ಬೈಲೂರು: ತ್ವಾಹ ಜುಮ್ಮಾ ಮಸ್ಜಿದ್ ಬೈಲೂರಿನ ಮದರಸಾದ ವಾರ್ಷಿಕ ಸಭೆ ಮೇ 26, 2024 ರಂದು ಹೈದರ್ ಆಲಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಮದರಸಾ ಕಮಿಟಿಯನ್ನು ಪುನರ್ ರಚನೆ ಮಾಡಲಾಯಿತು.

ಅಶ್ರಫ್ ಬೈಲೂರ್ ಅವರನ್ನು ಸರ್ವಾನುಮತದಿಂದ ಮದರಸಾದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಯಾಗಿ ಅಬ್ದುಲ್ ಮಜೀದ್ ಹಾಗೂ ಕೋಶಾಧಿಕಾರಿಯಾಗಿ ಇಮ್ತಿಯಾಜ್ ನೀರೆ , ಮನ್ಸೂರ್ ಅಹ್ಮದ್ ಆಡಳಿತ ಉಸ್ತುವಾರಿ ಆಯ್ಕೆ ಮಾಡಲಾಯಿತು.
ಸ್ವೀಕರಿಸಿದ ಹೊಸ ಆಡಳಿತ ಮಂಡಳಿಗೆ ಶುಭ ಹಾರೈಸಿದ ಮಸ್ಜಿದ್‌ನ ಆಡಳಿತ ಉಸ್ತುವಾರಿ ಮನ್ಸೂರ್ ಅಹ್ಮದ್, ತಮ್ಮ ಅವಧಿಯಲ್ಲಿ ಮದರಸಾ ಮಕ್ಕಳ ಭವಿಷ್ಯಕ್ಕಾಗಿ ಉತ್ತಮ ಆಡಳಿತವನ್ನು ನೀಡಲು ಹಾರೈಸಿದರು.