Thursday, July 25, 2024
Homeಉಡುಪಿಶ್ರೀ ಸಾಯಿ ಈಶ್ವರ್ ಗುರೂಜಿಯವರ ಇಪ್ಪತ್ತರೇಡನೇ ದಿನದ ಪ್ರದಕ್ಷಿಣೆ

ಶ್ರೀ ಸಾಯಿ ಈಶ್ವರ್ ಗುರೂಜಿಯವರ ಇಪ್ಪತ್ತರೇಡನೇ ದಿನದ ಪ್ರದಕ್ಷಿಣೆ

ಶಂಕರಪುರ ದ್ವಾರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿಯವರ ಮಹಾ ಸಂಕಲ್ಪದಂತೆ 108 ದಿನ 108 ಕ್ಷೇತ್ರ ಪ್ರದಕ್ಷಿಣೆಯ ಇಪ್ಪತ್ತರೇಡನೇ ದಿನದ ಪ್ರದಕ್ಷಿಣೆಗೆ ಜುಲೈ 05 ಶುಕ್ರವಾರ ಪಂಜಿಮಾರ್ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅರ್ಚಕರಾದ ಮೋಹಿತ್ ಭಟ್, ಸತೀಶ್ ಭಟ್ ರವರಿಗೆ ಧರ್ಮ, ರಾಷ್ಟ್ರ, ಯೋಧರು ಹಾಗೂ ಅವರ ಕುಟುಂಬದ ರಕ್ಷಣೆ , ಗೋರಕ್ಷಣೆ, ಸನಾತನ ಧರ್ಮ ರಕ್ಷಣೆ ಮತ್ತುಹಿಂದೂಗಳು ಮತಾಂತರವಾಗುವುದನ್ನು ತಡೆಯುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರದಲ್ಲಿ ನಿತ್ಯ ಪೂಜೆಯ ಬಳಿಕ ವಿಶೇಷ ಪ್ರಾರ್ಥನೆ ಮಾಡುವಂತೆ ಮನವಿ ಸಲ್ಲಿಸಿ ಬಿಲ್ವಾ ಪತ್ರೆಯ ಗಿಡ ನೀಡಿ ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರು ಸುಧೀರ್ ಹೆಗ್ಡೆ ಶಿರ್ವ ಕೋಡು, ಮ್ಯಾನೇಜರ್ ವಿಶ್ವನಾಥ ಶೆಟ್ಟಿ ,ಗ್ರಾಮಸ್ಥರಾದ ಸಂತೋಷ್ ಶೆಟ್ಟಿ ಕೋಡು, ಸಂತೋಷ್ ಶೆಟ್ಟಿ ಪಂಜಿಮಾರು, ರಾಜು ದೇವಾಡಿಗ, ಗೀತಾಂಜಲಿ ಎಮ್.ಸುವರ್ಣ , ಸುಪ್ರೀಯಾ ಶೆಟ್ಟಿ , ರಾಜೇಶ್ ಜೋಗಿ, ಸತೀಶ್ ದೇವಾಡಿಗ, ಶಶಾಂಕ್ ಹಾಗೂ ಭಕ್ತರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular