ಹೆಬ್ರಿ: ಅರಣ್ಯ ವ್ಯಾಪ್ತಿಯಲ್ಲಿ ಆಲಮಡ್ಡಿ ಮರದಿಂದ ಮೇಣ ಸಂಗ್ರಹಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಬೇಳಂಜೆ ತೆಂಕೂಲ ಅರಣ್ಯ ಪ್ರದೇಶದಲ್ಲಿ ಇವರು ಆಲದಮಡ್ಡಿ ಮರದಿಂದ ಮೇಣ ಸಂಗ್ರಹಿಸುತ್ತಿದ್ದರು ಎಂದು ಆಪಾದಿಸಲಾಗಿದೆ. ಬಂಧಿತರನ್ನು ಮಮ್ಮದ್ ಸಾಹೇಬ್ ಮತ್ತು ಫಕೀರ ಸಾಹೇಬ್ ಎಂದು ಗುರುತಿಸಲಾಗಿದೆ.
ಬಂಧಿತರು ಹಲವು ದಿನಗಳಿಂದ ಇಲ್ಲಿ ಮೇಣ ಸಂಗ್ರಹಿಸುತ್ತಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ಕಣ್ತಪ್ಪಿಸಿ ಇವರು ಮೇಣ ಸಂಗ್ರಹಿಸುತ್ತಿದ್ದರು. ಅರಣ್ಯಾಧಿಕಾರಿ ಗೌರವ್ ಎಸ್.ಎಂ., ಮಾರ್ಗದರ್ಶನದಲ್ಲಿ ಗಸ್ತು ಅರಣ್ಯ ಪಾಲಕ ಮಲ್ಲಯ್ಯ, ಸಿಬ್ಬಂದಿ ವರ್ಗದ ರಮೇಶ್ ಮತ್ತು ರಾಮಚಂದ್ರ ಅವರ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.