ಉಡುಪಿ: ಮಲ್ಪೆ ಬೀಚ್ ನಲ್ಲಿ ಸಮುದ್ರ ಪಾಲಾಗುತ್ತಿದ್ದ ಇಬ್ಬರು ಯುವಕರನ್ನು ರಕ್ಷಿಸಲಾದ ಘಟನೆ ಬುಧವಾರ ನಡೆದಿದೆ. ಬಳ್ಳಾರಿ ಕೊಟ್ಟೂರಿನ 25ರ ಹರೆಯದ ಗೋಪಿನಾಥ್ ಮತ್ತು 26ರ ಹರೆಯದ ರಂಗನಾಥ ಎಂಬ ಇಬ್ಬರು ಯುವಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆರು ಮಂದಿಯ ಗುಂಪು ಬೀಚ್ ವೀಕ್ಷಣೆಗೆ ಬಂದಿತ್ತು. ಇವರು ಈಜುತ್ತಿದ್ದಾಗ ಭಾರೀ ಅಲೆಯೊಂದು ತೀರಕ್ಕೆ ಅಪ್ಪಳಿಸಿದೆ. ಈ ವೇಳೆ ಇವರು ಅಲೆಗೆ ಸಿಲುಕಿ ನೀರು ಪಾಲಾಗಿದ್ದಾರೆ. ಬಳಿಕ ಜೀವರಕ್ಷಕರು ಯುವಕರನ್ನು ರಕ್ಷಿಸಿದ್ದಾರೆ.