Sunday, July 21, 2024
Homeಪುತ್ತೂರುನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಸಾವು

ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಸಾವು

ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಮೃತಪಟ್ಟ ಘಟನೆ ಬಂಟ್ವಾಳದ ನಾವೂರು ಎಂಬಲ್ಲಿ ನಡೆದಿದೆ. ಭಾನುವಾರ ಸಂಜೆ ಈ ಘಟನೆ ನಡೆದಿದೆ.

ಉಳ್ಳಾಲ ನಿವಾಸಿಗಳಾದ ಅನ್ಸಾರ್ ಅವರ ಪುತ್ರಿ, 11 ವರ್ಷದ ಆಶ್ರಾ ಮತ್ತು ಇಲಿಯಾಸ್ ಅವರ ಪುತ್ರಿ 14 ವರ್ಷದ ಮರಿಯಮ್ಮ ನಾಶಿಯಾ ಮೃತಪಟ್ಟ ಬಾಲಕಿಯರು.

ಮೂಲತಃ ನಾವೂರು ನಿವಾಸಿಯಾದ ಇಲಿಯಾಸ್ ಪ್ರಸ್ತುತ ಉಳ್ಳಾಲದಲ್ಲಿ ವಾಸವಾಗಿದ್ದಾರೆ. ಇಲ್ಲಿನ ನಾವೂರು ಮೈಂದಾಳದಲ್ಲಿ ಸಂಬಂಧಿಕರ ಮನೆಗೆ ಬಂದಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಭಾನುವಾರ ಸಂಜೆ ಮನೆಯವರೊಂದಿಗೆ ಮಕ್ಕಳು ನೀರಕಟ್ಟೆ ಎಂಬಲ್ಲಿ ನೇತ್ರಾವತಿ ನದಿಗೆ ತೆರಳಿ ಆಟವಾಡುತ್ತಿದ್ದರು. ಇದೇ ವೇಳೆ ಮಕ್ಕಳು ನೀರಿನಲ್ಲಿ ಮುಳುಗಿದರು. ಮಕ್ಕಳು ಮುಳುಗುತ್ತಿರುವುದನ್ನು ಪೋಷಕರು ಕಣ್ಣಾರೆ ಕಂಡರೂ, ಈಜು ಬಾರದೆ ಮಕ್ಕಳನ್ನು ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.

ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   

RELATED ARTICLES
- Advertisment -
Google search engine

Most Popular