ಪೆರ್ನಾಜೆ: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ, ಮೈಸೂರಿನಲ್ಲಿ
ಭರತನಾಟ್ಯ ಸ್ನಾತಕೋತ್ತರ ಪದವಿಯಲ್ಲಿ (ಮಾಸ್ಟರ್ ಆಫ್ ಪರ್ಫಾರ್ಮಿಂಗ್
ಆರ್ಟ್ಸ್ ) ವಿದುಷಿ ಶ್ರೀಮತಿ ಚೈತನ್ಯ ಕೋಟೆ
ಅತೀ ಹೆಚ್ಚು ಅಂಕಗಳನ್ನು ಪಡೆಯುವುದರೊಂದಿಗೆ, ಪ್ರಥಮ ರ‌್ಯಾಂಕ್ ಗಳಿಸಿ ದಿನಾಂಕ 18 ಜನವರಿ, 2025 ಶನಿವಾರದಂದು, ವಿಶ್ವವಿದ್ಯಾಲಯದಲ್ಲಿ ನಡೆದ 7,8 ಮತ್ತು 9 ನೇ ವಾರ್ಷಿಕ ಘಟಿಕೋತ್ಸವದಲ್ಲಿ ಎರಡು ಚಿನ್ನದ ಪದಕಗಳನ್ನು ಪಡೆದುಕೊಂಡಿರುತ್ತಾರೆ.
ಇವರು ಕುಕ್ಕೆ ಸುಬ್ರಹ್ಮಣ್ಯ ಸಮೀಪದ, ಬೂದಿಪಳ್ಳದ ಶ್ರೀಯುತ ಭಾಸ್ಕರ ಕೋಟೆ ಮತ್ತು ವೀಣಾ ಕೋಟೆ ಇವರ ಪುತ್ರಿ ಹಾಗು ಶ್ರೀ ತಿರುಮಲ ಭಟ್ ಇವರ ಪತ್ನಿ.
ಭರತನಾಟ್ಯ ಸ್ನಾತಕೋತ್ತರ ಪದವಿಯಲ್ಲಿ ವಿದುಷಿ ಶ್ರೀಮತಿ ಚೈತನ್ಯ ಕೋಟೆಗೆ ಎರಡು ಚಿನ್ನದ ಪದಕ
RELATED ARTICLES