ಪಡುಬಿದ್ರಿ: ಮೀನುಗಾರಿಕೆಗೆ ಇಳಿದಿದ್ದ ಇಬ್ಬರು ಸಮುದ್ರ ಪಾಲಾಗಿರುವ ಘಟನೆ ಹೆಜಮಾಡಿ ಸಮುದ್ರ ತೀರದಲ್ಲಿ ಸೋಮವಾರ (ಡಿ.30) ಸಂಭವಿಸಿದೆ.
ಅಮನ್(19) ಹಾಗೂ ಅಕ್ಷಯ್(19) ಮೃತಪಟ್ಟವರಾಗಿದ್ದಾರೆ. ಅಮನ್, ಅಕ್ಷಯ್ ಹಾಗೂ ಪವನ್ ಮೂವರು ಸೇರಿ ಮೀನುಗಾರಿಗೆ ತೆರಳಿದ್ದರು ಈ ವೇಳೆ ಮೂವರು ಸಮುದ್ರ ಪಾಲಾಗಿದ್ದಾರೆ. ಇಂದು ಎಳ್ಳಮಾವಾಸ್ಯೆ ಆಗಿದ್ದ ಕಾರಣ ಸಮುದ್ರ ತೀರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಈ ವೇಳೆ ಸಮುದ್ರಪಾಲಾದ ಮೂವರಲ್ಲಿ ಇಬ್ಬರು ಮೃತಪಟ್ಟಿದ್ದು, ಓರ್ವನನ್ನು ರಕ್ಷಣೆ ಮಾಡಲಾಗಿದೆ.
ಈ ಘಟನೆ ಸಂಬಂಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.