Wednesday, January 15, 2025
Homeಮಂಗಳೂರುಯು.ಎ.ಇ. ಬಂಟ್ಸ್ ಅಧ್ಯಕ್ಷರಾಗಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಅಧಿಕಾರ ಸ್ವೀಕಾರ

ಯು.ಎ.ಇ. ಬಂಟ್ಸ್ ಅಧ್ಯಕ್ಷರಾಗಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಅಧಿಕಾರ ಸ್ವೀಕಾರ

ಮಂಗಳೂರು: ಯು.ಎ.ಇ. ಬಂಟ್ಸ್ ಅಧ್ಯಕ್ಷರಾಗಿ ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಅಯ್ಕೆಯಾಗಿದ್ದಾರೆ.

ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರ ಕರ್ನಾಟಕ ಪರ ಸಂಘಟನೆಗಳು
ಕಾರ್ಯೊನ್ಮುಖವಾಗಿದೆ. ಇವುಗಳಲ್ಲಿ ಅತ್ಯಂತ ಹಿರಿಯ ಸಂಘಟನೆಗಳಲ್ಲಿ 47 ವರ್ಷಗಳಿಂದ ಯಶಸ್ವಿ
ಹೆಜ್ಜೆಗುರುತುಗಳನ್ನು ಮೂಡಿಸಿರುವ ಯು.ಎ.ಇ. ಬಂಟ್ಸ್ ಎಕ್ಸಿಕ್ಯೂಟ್ ಬೋರ್ಡ್‌ನ ವಾರ್ಷಿಕ ಮಹಾಸಭೆ
ದುಬಾಯಿ ಕರಾಮದಲ್ಲಿರುವ ಫಾರ್ಚೂನ್ ಆಟ್ರಿಯಂ ಹೋಟೆಲ್ ನ ಸಭಾಂಗಣದಲ್ಲಿ ನಡೆಯಿತು.

ಯು.ಎ.ಇ. ಬಂಟ್ಸ್ ಉಪಾಧ್ಯಕ್ಷರಾಗಿ ಹಲವು ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಾ ಬಂದಿರುವ
ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರು ನೂತನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ
ಮಾಡಲಾಯಿತು. ನಿಕಟ ಪೂರ್ವ ಅಧ್ಯಕ್ಷರಾಗಿರುವ ಸರ್ವೋತ್ತಮ ಶೆಟ್ಟಿಯವರಿಂದ ಅಧಿಕಾರ
ಹಸ್ತಾಂತರ ಸ್ವೀಕರಿಸಿದ ನಂತರ ನೂತನ ಆಡಳಿತ ಮಂಡಳಿಯ ಸರ್ವ ಸದಸ್ಯರಿಂದ ಪ್ರಮಾಣ ವಚನ ಸ್ವೀಕರಿಸಿದರು. 2025-26 ನೆ ಸಾಲಿನ ಯು.ಎ.ಇ. ಬಂಟ್ಸ್‌ನ ಕಾರ್ಯಕಾರಿ ಸಮಿತಿಯವರು
ಉಪಸ್ಥಿತರಿದ್ದರು.


ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರು
ತಮ್ಮನ್ನು ಆಯ್ಕೆಮಾಡಿರುವ ಯು.ಎ.ಇ. ಬಂಟ್ಸ್ ಆಡಳಿತ ಮಂಡಳಿಗೆ ತನ್ನ ಮನದಾಳದ ಕೃತಜ್ಞತೆಗಳನ್ನು
ಸಲ್ಲಿಸುತ್ತಾ ಸಂಘಟನೆಯನ್ನು ಯಶಸ್ವಿ ಪಥದತ್ತ ಕೊಂಡೊಯ್ಯುವ ಭರವಸೆಯನ್ನು ನೀಡಿ ಸರ್ವರ ಸಲಹೆ
ಸಹಕಾರ ಬೆಂಬಲ ನೀಡುವಂತೆ ಮನವಿಯನ್ನು ಮಾಡಿದರು.
ಯು.ಎ.ಇ. ಬಂಟ್ಸ್ ನ ಪೋಷಕರಾಗಿರುವ ಸರ್ವೋತ್ತಮ ಶೆಟ್ಟಿ ನೂತನ ಆಡಳಿತ ಮಂಡಳಿಗೆ ಶುಭ ಹಾರೈಸಿದರು.

ಯು.ಎ.ಇ. ಬಂಟ್ಸ್ 2025-26 (ಎರಡು ವರ್ಷದ ಅವಧಿ) ನೂತನ ಆಡಳಿತ ಮಂಡಳಿ ಪೋಷಕರು ಅಧ್ಯಕ್ಷರಾಗಿ ಸರ್ವೋತ್ತಮ್ ಶೆಟ್ಟಿ, ಉಪಾಧ್ಯಕ್ಷರಾಗಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಪ್ರೇಂನಾಥ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ರವಿರಾಜ್ ಶೆಟ್ಟಿ ಆಯ್ಕೆಯಾಗಿದ್ದಾರೆ.

ಆಡಳಿತ ಮಂಡಳಿಯ ಸದಸ್ಯರುಗಳಾಗಿ ರತ್ನಾಕರ್ ಶೆಟ್ಟಿ, ಗುಣಶೀಲ್ ಶೆಟ್ಟಿ, ಸುಜಾತ್ ಶೆಟ್ಟಿ, ಬಿ.ಕೆ.ಗಣೇಶ್ ರೈ, ಸುಂದರ್ ಶೆಟ್ಟಿ, ಸಜನ ಶೆಟ್ಟಿ ಹಾಗೂ ದಿನೇಶ್ ಶೆಟ್ಟಿ ಕೊಟ್ಟಿಂಜ. ಯು.ಎ.ಇ. ಬಂಟ್ಸ್ 2025-26ರ ನೂತನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಬುಧಾಬಿಯ ನಿತ್ಯಾಪ್ರಕಾಶ್ ಶೆಟ್ಟಿ, ಕೀರ್ತಿ ಶೆಟ್ಟಿ, ಪ್ರಸನ್ನ ಶೆಟ್ಟಿ, ಮೆಘಾ ಶೆಟ್ಟಿ, ಶ್ತೀಶ್ ಹೆಗ್ಡೆ, ವಿದ್ಯಾಶ್ರೀ ಹೆಗ್ಡೆ, ಕಿರಣ್ ಶೆಟ್ಟಿ, ದೀಪಾ ಶೆಟ್ಟಿ, ದುಬಾಯಿಯ ದಿನ್ ರಾಜ್ ಶೆಟ್ಟಿ, ದೀಪ್ತಿ ಶೆಟ್ಟಿ, ಅನೂಪ್ ಶೆಟ್ಟಿ ಚೈತ್ರಾ ಶೆಟ್ಟಿ, ವಸಂತ್ ಶೆಟ್ಟಿ, ರಜಿತಾ ಶೆಟ್ಟಿ, ಸುಪ್ರಜ್ ಶೆಟ್ಟಿ, ಪ್ರಥ್ವಿ ಶೆಟ್ಟಿ, ಸೀತರಾಮ್ ಶೆಟ್ಟಿ, ಅಶ್ವಿನಿ ಶೆಟ್ಟಿ, ಗೋಕುಲ್ ದಸ್ಸ್ ರೈ, ನಿಶ್ಮಿತಾ ರೈ, ರಾಸ್ ಅಲ್ ಖೈಮಾ: ಸಂಪತ್ ಶೆಟ್ಟಿ, ಲಾಸ್ಯ ಶೆಟ್ಟಿ ಆಯ್ಕೆಯಾಗಿದ್ದಾರೆ.

RELATED ARTICLES
- Advertisment -
Google search engine

Most Popular