ತಿರುವನಂತಪುರಂ: ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿರವರ ಒಂದನೇ ವರ್ಷದ ಪುಣ್ಯತಿಥಿಯ ಸ್ಮರಣಾರ್ಥ ತಿರುವಂತಪುರಂನಲ್ಲಿ ನಡೆಯುವ ಫೋಟೋ ಪ್ರದರ್ಶನ ಮೇಳ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್ ಉದ್ಘಾಟಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಯು.ಟಿ. ಖಾದರ್ ರವರು ಕೇರಳಕ್ಕೆ ತೆರಳಿದ ಸಂದರ್ಭ ತಿರುವಂತಪುರಂ ವಿಮಾನ ನಿಲ್ದಾಣದಲ್ಲಿ ಉಮ್ಮನ್ ಚಾಂಡಿರವರ ಮಗ, ಶಾಸಕ ಚಾಂಡಿ ಓಮನ್ ರವರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.