Saturday, July 20, 2024
Homeಮಂಗಳೂರುನಾನು ಒಳ್ಳೆಯವರಿಗೆ ಮಾತ್ರ ಕಾಣಿಸುತ್ತೇನೆ: ಯು.ಟಿ. ಖಾದರ್‌ ಮಾರ್ಮಿಕ ನುಡಿ

ನಾನು ಒಳ್ಳೆಯವರಿಗೆ ಮಾತ್ರ ಕಾಣಿಸುತ್ತೇನೆ: ಯು.ಟಿ. ಖಾದರ್‌ ಮಾರ್ಮಿಕ ನುಡಿ

ಮಂಗಳೂರು: ಕ್ಷೇತ್ರದ ಶಾಸಕರು ಕಾಣೆಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಯಾರೋ ಪೋಸ್ಟ್‌ ಮಾಡಿದ್ದಾರೆ. ಯಾರು ಹಾಕಿದ್ದಾರೆ ಎಂದು ಹೇಳಿದರೆ ನಾನೇ ಅವರಿಗೆ 5,000 ರೂ. ಕೊಡುತ್ತೇನೆ. ನಾನು ಒಳ್ಳೆಯವರಿಗೆ ಕಾಣುತ್ತೇನೆ. ಸಮಾಜ ವಿರೋಧಿಗಳಿಗೆ ಕಾಣಿಸುವುದಿಲ್ಲ ಎಂದು ವಿಧಾನಸಭಾ ಸ್ಪೀಕರ್‌ ಯು.ಟಿ. ಖಾದರ್‌ ಮಾರ್ಮಿಕವಾಗಿ ನುಡಿದಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಇತ್ತೀಚಿನ ಬೊಳಿಯಾರ್‌ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ್ದಾರೆ.
ಮಂಗಳೂರು ಕ್ಷೇತ್ರದಲ್ಲಿ ಸರ್ವಧರ್ಮದ ಜನರು ಸೌಹಾರ್ದದಿಂದ ಬದುಕುತ್ತಿದ್ದಾರೆ. ಕೆಲವು ಯುವಕರಿಂದಾಗಿ ಕ್ಷೇತ್ರಕ್ಕೆ ಕೆಟ್ಟ ಹೆಸರು ಬಂದಿದೆ. ಬೊಳಿಯಾರ್‌ನಲ್ಲಿ ನಡೆದ ಘಟನೆಯ ಬಳಿಕ ಸ್ಥಳೀಯರೇ ಅಲ್ಲಿ ಸೌಹಾರ್ದತೆ ನೆಲೆಸುವಂತೆ ಮಾಡಿದ್ದಾರೆ. ಹೊರಗಿನವರು ಅಲ್ಲಿಗೆ ಹೋಗಿ ಶಾಂತಿ ಕೆಡಿಸುವ ಕೆಲಸ ಮಾಡುವುದು ಬೇಡ ಎಂದು ಅವರು ಹೇಳಿದರು.
ಕ್ಷೇತ್ರದ ಶೇ. 99ರಷ್ಟು ಒಳ್ಳೆಯವರನ್ನು ನೋಡುವ ಜವಾಬ್ದಾರಿ ನನ್ನದು. ಉಳಿದ ಶೇ.1ರಷ್ಟು ಸಮಸ್ಯೆ ಸೃಷ್ಟಿಸುವವರನ್ನು ಪೊಲೀಸರು ನೋಡಿಕೊಳ್ಳುತ್ತಾರೆ. ಆಸ್ಪತ್ರೆಯಲ್ಲಿ ದಾಖಲಿಸಲ್ಪಟ್ಟವರು ಒಳ್ಳೆಯವರಾಗಿದ್ದರೆ ಹೋಗಿ ನೋಡುತ್ತಿದೆ. ಸಮಸ್ಯೆ ಸೃಷ್ಟಿಸುವವರನ್ನು ಹೋಗಿ ಸಂತೈಸುವ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

RELATED ARTICLES
- Advertisment -
Google search engine

Most Popular