ಮುಂಬೈನಲ್ಲಿ ನಡೆಯಲಿರುವ ಉಪ ಚುನಾವಣೆಗೆ ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆಯ ಬಣಗಳ ನಡುವಿನ ವಿವಾದಕ್ಕೆ ಚುನಾವಣಾ ಆಯೋಗವು ಸೋಮವಾರ ಶಿವಸೇನೆಯ “ಬಿಲ್ಲು ಮತ್ತು ಬಾಣ”ದ ಚಿಹ್ನೆಯನ್ನು ನಿಲ್ಲಿಸಿ ಮೂರು ಚಿಹ್ನೆ ಹಾಗೂ ಹೆಸರು ಕೊಡಲಾಗುವುದು ಎಂದು ಎರಡು ಬಣಗಳಿಗೆ ತಿಳಿಸಲಾಗಿದೆ.
ಮೊದಲ ಆಯ್ಕೆಯ ಹೆಸರು ‘ಶಿವಸೇನಾ ಬಾಳಾಸಾಹೇಬ್ ಠಾಕ್ರೆ’ ಎರಡನೇ ಆಯ್ಕೆಯ ಹೆಸರು ‘ಶಿವಸೇನಾ ಉದ್ಧವ್ ಬಾಳಾಸಾಹೇಬ್ ಠಾಕ್ರೆ’ ಆಯ್ಕೆಯಾಗಿದೆ ಎಂದು ತಿಳಿಸಿದ್ದಾರೆ. ಚಿಹ್ನೆಯ ಮೊದಲ ಆಯ್ಕೆಯಲ್ಲಿ ತ್ರಿಶೂಲ ಎರಡನೇ ಆಯ್ಕೆಯ ಚಿಹ್ನೆ ಸುರ್ಯೋದಯದ ಚಿತ್ರ ಎಂದು ಹೇಳಿದೆ.