Thursday, April 24, 2025
HomeUncategorizedಉಡುಪಿ: ಪುತ್ತೂರು ಭಗವತೀ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ 108 ಕಾಯಿ ಗಣಯಾಗ ಹಾಗೂ ಮಹಾರಥೋತ್ಸವ

ಉಡುಪಿ: ಪುತ್ತೂರು ಭಗವತೀ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ 108 ಕಾಯಿ ಗಣಯಾಗ ಹಾಗೂ ಮಹಾರಥೋತ್ಸವ

ಉಡುಪಿ: ಭಗವತೀ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಪುತ್ತೂರು, ಉಡುಪಿ ಇಲ್ಲಿ ದಿನಾಂಕ: 31-03-2025ನೇ ಸೋಮವಾರ ಕಾಲಾವಧಿ 108 ಕಾಯಿ ಗಣಯಾಗ ಹಾಗೂ ಮಹಾರಥೋತ್ಸವ ಜರುಗಲಿದೆ.

ಕಾರ್ಯಕ್ರಮಗಳ ವಿವರ

ತಾ. 28-03-2025 ಶುಕ್ರವಾರ ಸಂಜೆ ಗಂಟೆ 6:50ರಿಂದ ದೇವತಾ ಪ್ರಾರ್ಥನೆ, ಮುಹೂರ್ತ ಬಲಿ,

ಅಂಕುರಾರೋಪಣೆ ಇತ್ಯಾದಿ ನಡೆಯಲಿದೆ.

ತಾ. 29-03-2025 ಶನಿವಾರ ಬೆಳಿಗ್ಗೆ ಗಂಟೆ 8:50ಕ್ಕೆ ಧ್ವಜಾರೋಹಣ, ಸಂಜೆ ಗಂಟೆ 5.55ರಿಂದ ಸಾಯಂ ಬಲಿ, ಮಹಾರಂಗಪೂಜೆ, ಭೂತ ಬಲಿ ನಡೆಯಲಿದೆ.

ತಾ. 30-03-2025 ರವಿವಾರ ಸಂಜೆ ಗಂಟೆ 5:00ರಿಂದ ಸಾಯಂ ಬಲಿ, ಕಟ್ಟೆ ಪೂಜೆ, ಭೂತ ಬಲಿ ನಡೆಯಲಿದೆ.

ತಾ. 31-03-2025 ಬೆಳಿಗ್ಗೆ 7:35 ಪ್ರಾರ್ಥನೆ, ನವಕ ಪ್ರಧಾನ, ಕಲಶಾಭಿಷೇಕ, ಗಣಪತಿ ದೇವರ ಸನ್ನಿಧಿಯಲ್ಲಿ 108 ಕಾಯಿ ಗಣಯಾಗ ಬೆಳಿಗ್ಗೆ ಗಂಟೆ 10:40ಕ್ಕೆ ಪೂರ್ಣಾಹುತಿ ಗಂಟೆ 11:15ಕ್ಕೆ ಮಹಾಪೂಜೆ ಮಧ್ಯಾಹ್ನ ಗಂಟೆ 12:05ಕ್ಕೆ ರಥಾರೋಹಣ ಮಧ್ಯಾಹ್ನ ಗಂಟೆ 12:35ಕ್ಕೆ

ಮಹಾ ಅನ್ನಸಂತರ್ಪಣೆ ಸಂಜೆ ಗಂಟೆ 5.30 ರಿಂದ ಶ್ರೀ ಭಗವತೀ ಯಕ್ಷಕಲಾ ಬಳಗ (ರಿ.) ಪುತ್ತೂರು, ಉಡುಪಿ ಇವರಿಂದ ತೆಂಕುತಿಟ್ಟು ಯಕ್ಷಗಾನ ಬಯಲಾಟ ರಾತ್ರಿ ಗಂಟೆ 7:40ಕ್ಕೆ ಮಹಾರಥೋತ್ಸವ, ಮಹಾ ಭೂತಬಲಿ ಕವಾಟ ಬಂಧನ ನಡೆಯಲಿದೆ.

ತಾ. 01-04-2025ಮಂಗಳವಾರ ಬೆಳಿಗ್ಗೆ ಗಂಟೆ 6.40ಕ್ಕೆ ಕವಾಟೋದ್ಘಾಟನೆ, ಅಂಕುರಾರ್ಪಣೆ, ತುಲಾಭಾರ ಸೇವೆಗಳು, ಮಹಾಪೂಜೆ.ಸಂಜೆ ಗಂಟೆ 5-00 ರಿಂದ ಸಾಯಂ ಬಲಿ, ಓಕುಳಿ, ಕಟ್ಟೆಪೂಜೆ, ಅವಭ್ರತ, ಪೂರ್ಣಾಹುತಿ, ಮಹಾ ಮಂತ್ರಾಕ್ಷತೆ, ಧ್ವಜಾವರೋಹಣ, ಪ್ರಸಾದ ವಿತರಣೆ ಇತ್ಯಾದಿ.
ತಾ. 02-04-2025 ಬುಧವಾರ ಬೆಳಿಗ್ಗೆ ಶುದ್ಧ ಸಂಪ್ರೋಕ್ಷಣೆ, ರಾತ್ರಿ ಮಾರಿ ಜರುಗಲಿದೆ.

RELATED ARTICLES
- Advertisment -
Google search engine

Most Popular