ಉಡುಪಿ: ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಸಂಘಟನೆ ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಶನ್ (ರಿ).ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ಉಡುಪಿ ವಲಯ ದ 30ನೆಯ ವಾರ್ಷಿಕ ಸಭೆ ಜಗನ್ನಾಥ ಸಭಾಭವನದಲ್ಲಿ ಆಗಸ್ಟ್ 3 ರಂದು ನಡೆಯಿತು. ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಜಿಲ್ಲಾಧ್ಯಕ್ಷ ಪದ್ಮಪ್ರಸಾದ್ ಜೈನ್ ಸಭೆಯನ್ನು .ಉದ್ಘಾಟಿಸಿದರು.ಉಡುಪಿ ವಲಯದ ಅಧ್ಯಕ್ಷ ಸುಧೀರ್ ಎಂ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರುಣಾಕರ ಕಾನಂಗಿ ಸಂಚಾಲಕರು, ಎಸ್.ಕೆ.ಪಿ.ಎ ದಕ್ಷಿಣ ಕನ್ನಡ -ಉಡುಪಿ ಜಿಲ್ಲೆ ಜಯಕರ್ ಸುವರ್ಣ ಜಿಲ್ಲಾ ಉಪಾಧ್ಯಕ್ಷರು, ಎಸ್.ಕೆ.ಪಿ.ಎ., ದಕ್ಷಿಣ ಕನ್ನಡ-ಉಡುಪಿ ಜಿಲ್ಲೆ ದಯಾನಂದ ಬಂಟ್ವಾಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಎಸ್.ಕೆ.ಪಿ.ಎ., ದಕ್ಷಿಣ ಕನ್ನಡ-ಉಡುಪಿ ಜಿಲ್ಲೆ ನವೀನ್ ರೈ ಪಂಜಳ ಜಿಲ್ಲಾ ಕೋಶಾಧ್ಯಕ್ಷರು, ಎಸ್.ಕೆ.ಪಿ.ಎ., ದಕ್ಷಿಣ ಕನ್ನಡ-ಉಡುಪಿ ಜಿಲ್ಲೆ ವಾಸುದೇವ ರಾವ್ ಅಧ್ಯಕ್ಷರು, ಎಸ್.ಕೆ.ಪಿ.ಎ., ವಿವಿಧೋದ್ದೇಶ ಸಹಕಾರಿ ಸಂಘ ನಿ. ನವೀನ ಬಲ್ಲಾಳ್ ಗೌರವಾಧ್ಯಕ್ಷರು, ಎಸ್.ಕೆ.ಪಿ.ಎ., ಉಡುಪಿ ವಲಯ ಸುಂದರ ಪೂಜಾರಿ ವಲಯ ಪ್ರತಿನಿಧಿ ಜಿಲ್ಲಾ ಕಟ್ಟಡ ಸಮಿತಿ, ಎಸ್.ಕೆ.ಪಿ.ಎ., ದಕ್ಷಿಣ ಕನ್ನಡ-ಉಡುಪಿ ದಿವಾಕರ್ ಹಿರಿಯಡ್ಕ ಪ್ರಧಾನ ಕಾರ್ಯದರ್ಶಿ ರಮೇಶ್ ಭಟ್ ಎಲ್ಲೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಶಿಷ್ಟ ಸಾಧನೆ ಮಾಡಿದ ವಲಯ ಸದಸ್ಯರನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಯಿತು. ಈ ಬಾರಿ sslc , ದ್ವೀ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಸಾಧನೆ ಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ವಿತರಣೆ ಜರಗಿತು , ಸಮಾರಂಭದಲ್ಲಿ ನೂರಾರು ಛಾಯಾ ಚಿತ್ರಗಾರರು ಉಪಸ್ಥರಿದ್ದರು.