Saturday, January 18, 2025
Homeಉಡುಪಿಉಡುಪಿ: ಬಾವಿಗೆ ಬಿದ್ದ ಕೊಡಪಾನ (ನೀರಿನ ಕೊಡ) ತೆಗೆಯಲು ಹೋಗಿ ವ್ಯಕ್ತಿ ಸಾವು

ಉಡುಪಿ: ಬಾವಿಗೆ ಬಿದ್ದ ಕೊಡಪಾನ (ನೀರಿನ ಕೊಡ) ತೆಗೆಯಲು ಹೋಗಿ ವ್ಯಕ್ತಿ ಸಾವು

ಉಡುಪಿ: ಪಕ್ಕದ ಮನೆಯ ಬಾವಿಗೆ ಬಿದ್ದ ಕೊಡಪಾನ ತೆಗೆಯಲು ಇಳಿದ ವ್ಯಕ್ತಿಯೋರ್ವರು ನೀರುಪಾಲಾಗಿದ್ದಾರೆ. ಈ ಘಟನೆ ಮಣಿಪಾಲ ಸಮೀಪದ ಸರಳೆಬೆಟ್ಟು ವಿಷ್ಣುಮೂರ್ತಿ ದೇವಾಲಯ ಬಳಿ ಸಂಭವಿಸಿದೆ.

ಮೃತರನ್ನು ಸರಳಬೆಟ್ಟು ನಿವಾಸಿ ಕೂಲಿ ಕಾರ್ಮಿಕ ಶಿವ ನಾಯ್ಕ್(50) ಎಂದು ಗುರುತಿಸಲಾಗಿದೆ.

ಮಣಿಪಾಲದ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಇವರು ಕೊಡಪಾನ ತೆಗೆಯಲು ಬಾವಿಗೆ ಇಳಿದಾಗ ಆಯತಪ್ಪಿ ಮುಳುಗಿದ್ದಾರೆ. ಕೆಸರು ತುಂಬಿದ್ದ ಬಾವಿಯಲ್ಲಿ ಕಾಲು ಹೂತು ಹೋಗಿದ್ದರಿಂದ ಅವರಿಗೆ ಮೇಲಕ್ಕೆ ಬರಲಾಗಲಿಲ್ಲ. ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿದ್ದು, ಅಷ್ಟರಲ್ಲಾಗಲೇ ಶಿವ ನಾಯ್ಕಯ್ ಮೃತಪಟ್ಟಿದ್ದರು.

ನಂತರ ಕಾರ್ಯಾಚರಣೆ ಮೂಲಕ ಅಗ್ನಿಶಾಮಕದಳ ಸಿಬ್ಬಂದಿ ಮೇಲಕ್ಕೆತ್ತಿದ್ದಾರೆ. ತೀವ್ರವಾಗಿ ಅಸ್ವಸ್ಥಗೊಂಡ ಅವರನ್ನು ಅಗ್ನಿ ಶಾಮಕ ದಳದವರು ಮೇಲಕ್ಕೇತ್ತಿ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ದಾರಿ ಮಧ್ಯೆ ಅವರು ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ಮಣಿಪಾಲದ ಹೋಟೆಲ್‌ನಲ್ಲಿ ಕೆಲಸ ಮಾಡಿ ಕೊಂಡಿದ್ದ ಇವರು, ಪತ್ನಿ, ಓರ್ವ ಪುತ್ರನನ್ನು ಅಗಲಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular