ಉಡುಪಿ : ಮೂವರು ಪುಟ್ಟ ಪುಟ್ಟ ಮಕ್ಕಳ ಜೊತೆ ತಾಯಿ ನಾಪತ್ತೆಯಾದ ಘಟನೆ ನಡೆದಿದೆ. ಪ್ರಕರಣ ಸಂಬoಧ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಲಕ್ಷ್ಮವ್ವ ಕುಮಾರ ಮಾಳವತ್ತಾರ ಎಂಬ ಮಹಿಳೆ ತನ್ನ ಮೂವರು ಮಕ್ಕಳ ಜೊತೆ ಕಾಣೆಯಾಗಿದ್ದಾರೆ.
ದೊಡ್ಡಣಗುಡ್ಡೆಯ ಪೋಸ್ಟಲ್ ಕ್ವಾರ್ಟರ್ಸ್ನಿಂದ ನಾಪತ್ತೆಯಾಗಿರುವ ಮಹಿಳೆ ಹಾಗೂ ಆಕೆಯ ಮೂವರು ಮಕ್ಕಳು ಆಂಧ್ರಪ್ರದೇಶದಲ್ಲಿ ಇರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರಿಗೆ ದೊರೆತ ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.
ಮಾಹಿತಿ ಆಧರಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಲಕ್ಷ್ಮವ್ವ ಕುಮಾರ ಮಾಳವತ್ತಾರ ಎಂಬ ಮಹಿಳೆ ತನ್ನ ಮೂವರು ಮಕ್ಕಳೊಂದಿಗೆ ಡಿ.4ರಂದು ದೊಡ್ಡಣಗುಡ್ಡೆಯ ಅಂಚೆ ಕ್ವಾರ್ಟರ್ಸ್ನಲ್ಲಿರುವ ತನ್ನ ಮನೆಯಿಂದ ಹೊರಟು ನಾಪತ್ತೆಯಾಗಿದ್ದಳು.