ಅಸೋಸಿಯೇಷನ್ ಓಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ ಮತ್ತು ಅರ್ಚಿಟೆಕ್ಟ್ಸ್ (ರಿ ) ಉಡುಪಿ ವತಿಯಿಂದ – ಸಂಸ್ಥೆಯ ರಜತ ಮೊಹೋತ್ಸವದ ಪ್ರಯುಕ್ತ ಮೀಟ್ ಮತ್ತು ಗ್ರೀಟ್ ಕಾರ್ಯಕ್ರಮ ಬುಧವಾರ ಕಡಿಯಾಳಿ ಹೋಟೆಲ್ ಓಷನ್ ಪರ್ಲ್ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿ ಮಂಗಳೂರಿನ ಎಸ್ ಎಸ್ ನಾಯಕ್ ಮತ್ತು ಅಸೋಸಿಯೇಟ್ಸ್ ಮುಖ್ಯಸ್ಥರಾದ ಸಿ ಎ ಎಸ್ ಎಸ್ ನಾಯಕ್ ರವರು ದೀಪ ಬೆಳಗಿಸಿ ಚಾಲನೆ ನೀಡಿ ಉಡುಪಿ ಪ್ರಗತಿ ಹೊಂದಲು ಎಂಜಿನಿಯರ್ಸಗಳ ಕೊಡುಗೆಅಪಾರವಾದದ್ದು . ಯುವ ಇಂಜಿನಿಯರ್ ದೊಡ್ಡ ನಗರಕ್ಕೆ , ವಿದೇಶಕ್ಕೆ ವಲಸೆ ಹೋಗುವುದನ್ನು ನಿಲ್ಲಿಸಿ , ಊರಿನಲ್ಲಿ ಇದ್ದು ನಿರ್ಮಾಣ ಕ್ಷೇತ್ರಕ್ಕೆ ಕೊಡುಗೆ ನೀಡಬಹುದು . ಕೇಂದ್ರ , ರಾಜ್ಯ ಸರಕಾರದ ವಿವಿಧ ಯೋಜನೆಯ ಬ್ಯಾಂಕ ಸಾಲ ಸೌಲಭ್ಯ ಗಳ ಮಾಹಿತಿ ನೀಡಿದರು , ಯುವ ಜನಾಂಗದವರು ನಿರ್ಮಾಣ ಕ್ಷೇತ್ರಕ್ಕೆಬೇಕಾದ ಉತ್ಪನ್ನಗಳನ್ನು ( ಹೋಲೊ ಬ್ಲಾಕ್ , ಟೈಲ್ಸ್ , ಪಿ ವಿ ಸಿ ಪೈಪ್ ಗಳಂಥ ಗುಣಮಟ್ಟದ ವಿವಿಧ ವಸ್ತು ತಯಾರಿಕೆ ಮಾಡಿ ನೀವುಗಳು ಸರ್ ಎಂ.ವಿಶ್ವೇಶ್ವರಯ್ಯರ ತರಹ ಸಾಧಕ ಎಂಜಿನಿಯರ್ ಗಳಾಗಿ ಮೂಡಿ ಬರಬೇಕು ಎಂದು ಶುಭ ಹಾರೈಸಿದರು . ಸಂಸ್ಥೆಯ ವತಿಯಿಂದ C A ಎಸ್ ಎಸ್ ನಾಯಕ್ ರವರನ್ನು ಗೌರವಿಸಲಾಯಿತು.
ಸಮಾರಂಭದಲ್ಲಿ ಉಡುಪಿ (ಎ ಸಿ ಸಿ ಇ ಎ) ಗೌರವಾಧ್ಯಕ್ಷ ನಾಗೇಶ್ ಹೆಗ್ಡೆ , ಲಯನ್ ವಿಜೇಯ ಶೆಟ್ಟಿ , ನಿಕಟ ಪೂರ್ವ ಅಧ್ಯಕ್ಷರಾದ ಪಾಂಡುರಂಗ ಆಚಾರ್ಯ , ಮಾಜಿ ಅಧ್ಯಕ್ಷರಾದ ಗೋಪಾಲ್ ಭಟ್ , ಹಾಗೂ ನೂರಾರು ಇಂಜಿನಿಯರ್ಸ್ ಉಪಸ್ಥಿತರಿದ್ದರು. ಅಧ್ಯಕ್ಷರಾದ ಆರ್ ಯೋಗೀಶ್ ಚಂದ್ರಾ ಧಾರ ಸ್ವಾಗತಿಸಿದರು , ಖಚಾಂಚಿ ಅಮಿತ್ ಅರವಿಂದ್ ನಾಯಕ್ ಕಾರ್ಯಕ್ರಮ ನಿರೂಪಣೆಗೈದರು , ಕಾರ್ಯದರ್ಶಿ ಮಹೇಶ್ ಕಾಮತ್ ವಂದಿಸಿದರು. ಸಂಸ್ಥೆಯ ಸದ್ಯಸರಿಂದ ಮನೋರಂಜನೆ ಕಾರ್ಯಕ್ರಮ ಜರಗಿತು.
