ಉಡುಪಿ: ಬೆಡ್‌ಶೀಟ್ ಮಾರುವ ನೆಪದಲ್ಲಿ ಅಪರಿಚಿತ ವ್ಯಕ್ತಿ ವೃದ್ಧೆಯೊಬ್ಬರ ಮನೆಗೆ ನುಗ್ಗಿರುವ ಘಟನೆ ನಡೆದಿದೆ. ಉಡುಪಿಯ ಅಂಬಲಪಾಡಿ ಸಮೀಪದ ಶ್ಯಾಮ್ ಸದನದಲ್ಲಿ ಈ ಘಟನೆ ನಡೆದಿದೆ. ಪ್ರವೀಣ್ ಎಂಬವರು ದುಬೈನಲ್ಲಿ ಕೆಲಸದಲ್ಲಿದ್ದು, ಅವರ ತಾಯಿ ವಿನೋದಿನಿ (82) ಉಡುಪಿ ಅಂಬಲಪಾಡಿಯ ಶ್ಯಾಮ್ ಸದನದಲ್ಲಿ ಒಬ್ಬರೇ ವಾಸವಾಗಿದ್ದರು. ಸೆ.14ರಂದು ಸಂಜೆ ಅಪರಿಚಿತ ವ್ಯಕ್ತಿ ಬೆಡ್‌ಶೀಟ್ ಮಾರುವ ನೆಪದಲ್ಲಿ ವಿನೋದಿನಿ ಅವರ ರೂಂ ಪ್ರವೇಶಿಸಿ ಬೆಡ್‌ಶೀಟ್ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದ ಎನ್ನಲಾಗಿದೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮನೆಯ ಕೇರ್ ಟೇಕರ್ ತುಳಜಾ ಅವರು ಪ್ಲಂಬಿಂಗ್ ಕೆಲಸಕ್ಕೆ ಬಂದಿದ್ದ ಪ್ರಶಾಂತ್ ಅವರನ್ನು ಕರೆದುಕೊಂಡು ಬರುವಷ್ಟರಲ್ಲಿ ಅಪರಿಚಿತ ವ್ಯಕ್ತಿ ಮನೆಯಿಂದ ಹೊರಬಂಧು ಕಾರಿನಲ್ಲಿ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.