ಕಾರ್ಕಳ : ಪ್ರಪಂಚದ ಅತಿ ವಿಸ್ತಾರವಾದ ಪ್ರಜಾಪ್ರಭುತ್ವ ರಾಷ್ಟ್ರ ಭಾರತದ ಲೋಕಸಭೆಗೆ 2024ರ ಎಪ್ರಿಲ್ ನಲ್ಲಿ ನಡೆಯುವ ಚುನಾವಣೆಗೆ ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಭಾರತಿಯ ಜನತಾ ಪಾರ್ಟಿ ಸರ್ವ ಸನ್ನದ್ಧವಾಗಿದೆ.
ʻವಿಕಾಸʼ ಜನಸೇವಾ ಕಚೇರಿಯಲ್ಲಿ ಕರ್ನಾಟಕ ಭಾರತೀಯ ಜನತಾ ಪಾರ್ಟಿಯ ರಾಜ್ಯ ಚುನಾವಣಾ ನಿರ್ವಹಣಾ ಸಂಚಾಲಕರಾದ ಶಾಸಕ ಸುನಿಲ್ ಕುಮಾರ್ ನೇತೃತ್ವದಲ್ಲಿ, ಮಂಡಲಾದ್ಯಕ್ಷ ನವೀನ್ ನಾಯಕ್ ಅಧ್ಯಕ್ಷತೆಯಲ್ಲಿ ಮಂಡಲ ಸಮಿತಿ ಹಾಗೂ ವಿವಿಧ ಮೋರ್ಚಾ ಪದಾಧಿಕಾರಿಗಳ ಸಭೆ ನಡೆಸಲಾಗಿ ಭಾರತೀಯ ಜನತಾ ಪಾರ್ಟಿಯ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಒಂದು ಲಕ್ಷಕ್ಕೂ ಅಧಿಕ ಮತಗಳನ್ನು ದೊರಕಿಸಿ ಕೊಡುವುದರೊಂದಿಗೆ ಅತ್ಯಧಿಕ ಮತಗಳ ಅಂತರದಿಂದ ಜಯಗೊಳಿಸಿ ಪ್ರಧಾನಿ ಮೋದಿ ಅವರ ಕೈಬಲಪಡಿಸುವ ನಿಟ್ಟಿನಲ್ಲಿ ಮಾಡಬೇಕಾದ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು. ಮಂಡಲಾಧ್ಯಕ್ಷ ನವೀನ್ ನಾಯಕ್ ನೇತೃತ್ವದಲ್ಲಿ ಎಲ್ಲಾ ಗ್ರಾಮ ಮಟ್ಟದಲ್ಲಿ ಸರಣಿ ಚುನಾವಣಾ ಪೂರ್ವಭಾವಿ ಸಭೆ ದಿನಾಂಕ, ಮಹಿಳಾ ಮೋರ್ಚಾದ ಸಭೆ ನಿಗದಿಪಡಿಸಲಾಗಿದೆ. ಕಾರ್ಕಳ ಚುನಾವಣಾ ಉಸ್ತುವಾರಿ ಶ್ಯಾಮಲಾ ಕುಂದರ್, ಸಂಚಾಲಕ ಮಣಿರಾಜ್ ಶೆಟ್ಟಿ ಮುಂದಿನ ಒಂದು ತಿಂಗಳು ಸಂಪೂರ್ಣ ಚುನಾವಣಾ ಪ್ರಚಾರದ ಪ್ರವಾಸ ಮಾಡಲಿದ್ದು,ಇದೇ ದಿನಾಂಕ 25/03/2024 ರಂದು ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯ ಕಾರ್ಕಳ ಭೇಟಿ ಸಂದರ್ಭ ಕಾರ್ಯಕ್ರಮ ರೂಪಿಸಿ ಜವಾಬ್ದಾರಿ ಹಂಚಲಾಗಿದೆ.
ಕ್ರಸಂ | ಸಮಯ | ಸ್ಥಳ | ಕಾರ್ಯಕ್ರಮ |
08:30 | ಬೇಳಂಜೆ | ಹತ್ರಕಟ್ಟೆ ಭೇಟಿ | |
09:30 | ರಾಮಮಂದಿರಹೆಬ್ರಿ | ಕಾರ್ಯಕರ್ತರ ಸಭೆ | |
11:00 | ರಾಮಮಂದಿರಅಜೆಕಾರು | ಕಾರ್ಯಕರ್ತರ ಸಭೆ | |
12:30 | ಬೈಲೂರುಮಾರಿಗುಡಿ | ಕಾರ್ಯಕರ್ತರ ಸಭೆ | |
03:00 | ತುಡಾರುಸಭಾಭವನ ಬಜಗೋಳಿ | ಮಹಿಳಾ ಕಾರ್ಯಕರ್ತೆಯರ ಸಭೆ | |
04:30 | ಕಾರ್ಕಳ | ಚುನಾವಣಾ ಕಛೇರಿ ಉದ್ಘಾಟನೆ | |
05:30 | ಕಾರ್ಕಳ | ಬಿಜೆಪಿ ಕಛೇರಿ ಭೇಟಿ | |
06:00 | ಕಾರ್ಕಳ | ಶ್ರೀ ವೆಂಕಟರಮಣ ದೇವಸ್ಥಾನ ಭೇಟಿ | |
06:30 | ಕಾರ್ಕಳ | ಕಾರ್ಕಳ ಮಾರಿಗುಡಿ ದೇವಸ್ಥಾನಭೇಟಿ | |
07:00 | ಕಾರ್ಕಳ | ಶ್ರೀಅನಂತಕೃಷ್ಣ ದೇವಸ್ಥಾನಭೇಟಿ | |
07:30 | ಕಾರ್ಕಳ | ಆನೆಕೆರೆ ಜೈನ ಮಠ ಭೇಟಿ | |
08:00 | ಕಾರ್ಕಳ | ಶ್ರೀ ಕಾಳಿಕಾಂಬಾದೇವಸ್ಥಾನ ಭೇಟಿ | |
08:30 | ಕಾರ್ಕಳ | ನಂದಳಿಕೆ ಸಿರಿ ಜಾತ್ರೆಭೇಟಿ | |
09:00 | ಬೆಳ್ಮಣ್ | ಪುನರೂರು ದೇವಸ್ಥಾನ ಭೇಟಿ |
ಸದೃಢ ಭಾರತ ನಿರ್ಮಾಣಕ್ಕಾಗಿ ಈ ಭಾರಿ ಕಾರ್ಕಳ ವಿಧಾನ ಸಭಾ ವ್ಯಾಪ್ತಿಯಲ್ಲಿ ದಾಖಲೆ ಪ್ರಮಾಣದ ಅಂತರ ದೊರಕಿಸಿಕೊಡುವ ನಿಟ್ಟಿನಲ್ಲಿ ಕಾರ್ಯಕರ್ತರು ಹಗಲಿರುಳು ಶ್ರಮಿಸುವಂತೆ ವಿನಂತಿಸಿದರು.