Saturday, December 14, 2024
Homeಉಡುಪಿಉಡುಪಿ ದಸರಾ: ಶ್ರೀ ಶಾರದಾ ಮಾತೆಯ ವಿಸರ್ಜನಾ ಶೋಭಾ ಯಾತ್ರೆ

ಉಡುಪಿ ದಸರಾ: ಶ್ರೀ ಶಾರದಾ ಮಾತೆಯ ವಿಸರ್ಜನಾ ಶೋಭಾ ಯಾತ್ರೆ

ಉಡುಪಿ  ದಸರಾ  ಸಾರ್ವಜನಿಕ ಶ್ರೀ ಶಾರದೊತ್ಸವ ಸಮಿತಿ ಉಡುಪಿ ಇದರ ವತಿಯಿಂದ ಅಜ್ಜರಕಾಡು  ಗೋವಿಂದ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ 9  ನೇ ವರ್ಷದ ಉಡುಪಿ  ದಸರಾ ಮಹೋತ್ಸವದ ವಿಸರ್ಜನಾ ಶೋಭಾ ಯಾತ್ರೆಯ ಅ. 12   ಶನಿವಾರ  ಉದ್ಘಾಟನೆಯನ್ನು ಉಡುಪಿ  ನಗರಸಭೆಯ  ನೂತನ ಅಧ್ಯಕ್ಷರಾದ ಪ್ರಭಾಕರ ಪೂಜಾರಿ ಚಾಲನೆ   ಶುಭ ಹಾರೈಸಿದರು.

ಸಮಾರಂಭದಲ್ಲಿ ಶಾರದೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಬೈಕಾಡಿ ಸುಪ್ರಸಾದ್ ಶೆಟ್ಟಿ, ಮುಖ್ಯ ಅತಿಥಿಗಳಾಗಿ  ರವೀಂದ್ರ  ಶೆಟ್ಟಿ , ನಗರ ಸಭಾ ಸದಸ್ಯರಾದ  ವಿಜಯ ಕೊಡವೂರು, ಟಿ ಜಿ  ಹೆಗಡೆ, ವೀಣಾ ಶೆಟ್ಟಿ, ಅಶೋಕ್ ಶೆಟ್ಟಿಗಾರ್ ,  ಶಾರದಾ ಮೊಹೋತ್ಸವ ಸಮಿತಿಯ  ಪ್ರಧಾನ ಕಾರ್ಯದರ್ಶಿ ಶ್ರೀ ಲಕ್ಷ್ಮೀ ನಾರಾಯಣ ರಾವ್ ಮಟ್ಟು, ಉಪಧ್ಯಕ್ಷರಾದ  ಶ್ರೀ ರಾಧಾಕೃಷ್ಣ ಮೆಂಡನ್  ಮಲ್ಪೆ ಸುರೇಶ್  ಶೇರಿಗಾರ್, ಪದ್ಮಾ ರತ್ನಾಕರ್  , ತಾರಾ  ಆಚಾರ್ಯ, ಮೊದಲಾದ ಗಣ್ಯರು ಉಪಸ್ಥಿತರಿದ್ದರು.                           

  ಅರ್ಚಕರಾದ    ದಾಮೋದರ್ ಭಟ್ ಕರಂ ಬಳ್ಳಿ  ಧಾರ್ಮಿಕ ಪೂಜಾ ವಿಧಾನಗಳನ್ನು ನೆರವೇರಿಸಿದರು.  ಶ್ರೀ  ಶಾರದಾ  ಮಾತೆಯ  ವಿಸರ್ಜನಾ ಶೋಭಾ ಯಾತ್ರೆ ಮಂಗಳವಾದ್ಯ, ಚಂಡೆ , ಕುಣಿತಾ ಭಜನಾ ತಂಡಗಳು , ತಾಲೀಮ್ ಪ್ರದರ್ಶನ, ನಾಸಿಕ್ ಬ್ಯಾಂಡ್, ವೇದ ಘೋಷ , ಭಜನೆಯೊಂದಿಗೆ  ಅಜ್ಜರಕಾಡು ಗೋವಿಂದ್ ಕಲ್ಯಾಣ ದಿಂದ ಹೊರಟು  ಜೋಡುರಸ್ತೆ  , ಬಿಗ್ ಬಜಾರ್  , ಹಳೇ ಡಯಾನಾ ಸರ್ಕಲ್  , ಕೆ ಎಮ್  ಮಾರ್ಗ  , ಸರ್ವಿಸ ಬಸ್ ನಿಲ್ದಾಣ  , ಸಿಟಿ  ಬಸ್ ನಿಲ್ದಾಣ ಮುಖ್ಯ ರಸ್ತೆಯಲ್ಲಿ ಸಾಗಿಬಂದು ಶ್ರೀ  ಶಂಕರ ನಾರಾಯಣ  ದೇವಳದ ಪದ್ಮ  ಸರೋವರದಲ್ಲಿ ವಿಸರ್ಜನೆ ಮಾಡಲಾಯಿತು.                                                                                                                                                                                                                                                                                              

RELATED ARTICLES
- Advertisment -
Google search engine

Most Popular