Friday, February 14, 2025
Homeಉಡುಪಿಉಡುಪಿ ಜಿಲ್ಲಾ ಮಟ್ಟದ ವಿಜ್ಞಾನ, ಗಣಿತ, ವೇದಗಣಿತ ಮತ್ತು ಸಂಸ್ಕೃತಿ ಜ್ಞಾನ ಮಹೋತ್ಸವ -2024

ಉಡುಪಿ ಜಿಲ್ಲಾ ಮಟ್ಟದ ವಿಜ್ಞಾನ, ಗಣಿತ, ವೇದಗಣಿತ ಮತ್ತು ಸಂಸ್ಕೃತಿ ಜ್ಞಾನ ಮಹೋತ್ಸವ -2024

ಮಕ್ಕಳ ಆತ್ಮ ಜ್ಞಾನವನ್ನು ಉತ್ತಮಗೊಳಿಸುವಲ್ಲಿ -ವಿಜ್ಞಾನ ಗಣಿತ-ವೇದಗಣಿತ-ಸಂಸ್ಕೃತಿ ಜ್ಞಾನದ ಪಾತ್ರ ಹಿರಿದು – ಶೀ ಕೆ ಪಾಂಡುರಂಗ ಪೈ

ಸ್ಪರ್ಧಾತ್ಮಕ ಯಗದಲ್ಲಿ ಕೇವಲ ಓದು ಬರಹ ಪುಸ್ತಕಗಳಲ್ಲಿ ಕಳೆದುಹೋಗಿ ತಮ್ಮ ಸುಪ್ತ ಪ್ರತಿಭೆಯನ್ನು ಹೊರಸೂಸಲು ಸಮಯ ಇಲ್ಲದಂತಾದ ಸಮಯದಲ್ಲಿ ಇಂತಹ ‌ ಮೇಳಗಳು ಮಕ್ಕಳನ್ನು ಉತ್ತೇಜಿಸಲು ಸಹಕಾರಿಯಾಗಿದೆ ಎಂದು ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಅಧ್ಯಕ್ಷರಾದ ಪಾಂಡುರಂಗ ಪೈ ರವರು ಅಭಿಪ್ರಾಯ ಪಟ್ಟರು. ಅವರು ಡ್ಯುಯಲ್ ಸ್ಟಾರ್ ಶಾಲೆ ಅಮಾಸೆಬೈಲು ಇಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ವಿಜ್ಞಾನ, ಗಣಿತ, ವೇದಗಣಿತ ಮತ್ತು ಸಂಸ್ಕೃತಿ ಜ್ಞಾನ ಮಹೋತ್ಸವ -2024 ರ ಅಧ್ಯಕ್ಷತೆ ವಹಿಸಿ ಮಕ್ಕಳ ಆತ್ಮ ಜ್ಞಾನವನ್ನು ಉತ್ತಮಗೊಳಿಸುವಲ್ಲಿ -ವಿಜ್ಞಾನ ಗಣಿತ-ವೇದಗಣಿತ-ಸಂಸ್ಕೃತಿ ಜ್ಞಾನದ ಪಾತ್ರ ಹಿರಿದು ಎಂದರು.

ವೇದಿಕೆಯಲ್ಲಿ ಶಾಲೆಯ ಆಡಳಿತ ಮಂಡಳಿ ಸದಸ್ಯರಾದ ರಘುಪತಿ ಭಟ್ ಗೆಣಸಿನಕುಣಿ, ಶಾಲಾ ಪ್ರಾಂಶುಪಾಲ ಪ್ರಕಾಶ್ ಆಚಾರ್ಯ ವಡ್ದರ್ಸೆ, ವಿಭಾಕ್ ಉಡುಪಿ ಜಿಲ್ಲೆಯ ಕಾರ್ಯದರ್ಶಿ ಮಹೇಶ್ ಹೈಕಾಡಿ, ಶಾಲೆ, ಉಪಾಧ್ಯಕ್ಷರಾದ ಸಚ್ಚಿದಾನಂದ ಅಡಿಗ, ಶಿಕ್ಷಕರ ರಕ್ಷಕ ಸಂಘದ ಅಧ್ಯಕ್ಷರಾದ ಗಾಯಿತ್ರಿ ಅಡಿಗ, ಜಿಲ್ಲಾ ವಿಜ್ಞಾನ ಪ್ರಮುಖ್ ಸಂಧ್ಯಾ ಭಟ್, ಜಿಲ್ಲಾ ಗಣಿತ ಪ್ರಮುಖ ಜ್ಯೋತಿ ಅಡಿಗ, ಜಿಲ್ಲಾ ಸಂಸ್ಕೃತಿ ಜ್ಞಾನ ಪ್ರಮುಖ ಕುಮಾರಿ ಜ್ಯೋತಿ ಎಳ್ಳಾರೆ, ಹಿರಿಯ ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ರಾಧಿಕಾ ರಾವ್, ಕಿರಿಯ ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಅಮಿತಾ, ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಕುಮಾರಿ ಸೌಮ್ಯ, ವಿದ್ಯಾರ್ಥಿ ತಂಡದ ನಾಯಕ ಮೋಹಿದ್, ಟ್ರಾನ್ಸ್ಪೋರ್ಟ್ ಮ್ಯಾನೇಜರ್ ರಮಾಕಾಂತ್, ವಿಜ್ಞಾನ ಶಿಕ್ಷಕಿ ಅಮೃತಾ ಉಪಸ್ಥಿತರಿದ್ದರು. ರಾಧಿಕ ರಾವ್ ಸ್ವಾಗತಿಸಿದರು, ಜಿಲ್ಲಾ ವಿಜ್ಞಾನ ಪ್ರಮುಖ ಸಂಧ್ಯಾ ಭಟ್ ಪ್ರಸ್ತಾವಿಕ ನುಡಿಯನ್ನು ಆಡಿದರು. ಕುಮಾರಿ ಜ್ಯೋತಿ ಎಳ್ಳಾರೆ ವಂದಿಸಿದರು. ಶಿಕ್ಷಕ ವಿಘ್ನೇಶ್ ನಿರೂಪಿಸಿದರು.

RELATED ARTICLES
- Advertisment -
Google search engine

Most Popular