ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ವತಿಯಿಂದ ಪಿಯುಸಿ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಅಜ್ಜರಕಾಡಿನ ಜಿಲ್ಲಾ ಮೈದಾನದಲ್ಲಿ ದಿನಾಂಕ 12-12-2024 ಗುರುವಾರದಂದು ಆಯೋಜಿಸಲಾಗಿದೆ.
ನಾಲ್ಕು ಪ್ರಮುಖ ಗತಿವಿಧಿಗಳ ಮೂಲಕ ವಿವಿಧ ಕೇತ್ರದಲ್ಲಿ ಕಾರ್ಯ ನಿರ್ವಹಿಸುವ ಎಬಿವಿಪಿ ಈ ಬಾರಿ ಅಖಿಲ ಭಾರತ ಮಟ್ಟದಲ್ಲಿ ಖೇಲೋ ಭಾರತ್ ಗತಿವಿಧಿ ಮೂಲಕ ಕ್ರೀಡಾ ಚಟುವಟಿಕೆಯನ್ನು ಬ್ರಹತ್ ಮಟ್ಟದಲ್ಲಿ ಕೈಗೊಳ್ಳುತ್ತಿದೆ.
ಉಡುಪಿಯಲ್ಲಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ 100, 200, 400, 800 ಹಾಗೂ 1500 ಮೀಟರ್ ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಜಾವಲಿನ್ ಥ್ರೋ, ಶಾಟ್ ಪುಟ್, ಡಿಸ್ಕಸ್ ಥ್ರೋ, ಮತ್ತು ರಿಲೇ ಸ್ಪರ್ಧೆಗಳನ್ನು ಒಳಗೊಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.