ಉಡುಪಿ: ಸೇವಾ ಭಾರತಿ (ರಿ.), ಕನ್ಯಾಡಿ ಮತ್ತು ದಿವ್ಯಾಂಗ ರಕ್ಷಣಾ ಸಮಿತಿ ಉಡುಪಿ ಜಿಲ್ಲೆ ಇವುಗಳ ಆಶ್ರಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿಶೇಷ ಚೇತನರ ಸಬಲೀಕರಣ ಇಲಾಖೆ ಇವುಗಳ ಸಹಕಾರದಲ್ಲಿ ವಿಶ್ವಬೆನ್ನುಹುರಿ ಅಪಘಾತ ದಿನಾಚರಣೆಯ ಪ್ರಯುಕ್ತ ಮೂರು ದಿನಗಳ ಉಡುಪಿ ಜಿಲ್ಲಾ ಸಮಾವೇಶ ನಡೆಯಲಿದೆ. ಜಿಲ್ಲೆಯಲ್ಲಿರುವ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗಾಗಿ ಈ ಸಮಾವೇಶ ಆಯೋಜಿಸಲಾಗಿದೆ.
ಅಲ್ಲದೆ 26ನೇ ಉಚಿತ ವೈದ್ಯಕೀಯ ತಪಾಸಣಾ, ಮಾಹಿತಿ ಮತ್ತು ಜಾಗೃತಿ ಶಿಬಿರ ಕೂಡ ಇದೇ ವೇಳೆ ನಡೆಯಲಿದೆ. ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಸೆ. 3, 4, 5ರಂದು ಮೂರು ದಿನಗಳ ಕಾಲ ಈ ಶಿಬಿರ ಆಯೋಜಿಸಲಾಗಿದೆ.
ಮೂಲಕ ಪಟ್ಟಿ ಮಾಡಿದ್ದು, ಇನ್ನು ಅವಶ್ಯಕತೆ ಬಾಕಿ ಇದ್ದವರು ತಿಳಿಸಬಹುದು ಎಂದು ಶಿಬಿರವು ಪ್ರಕಟಿಸಿದೆ.
ಪರಿಕರಣೆಗಳ ವಿತರಣೆಯು ಅದರದೇ ಆದ ಮಾನದಂಡ ಹೊಂದಿದ್ದು, ವಿತರಣೆ ನಿರ್ಧಾರ ಫಲಾನುಭವಿಗಳ ಅವಶ್ಯಕತೆಗೆ ತಕ್ಕಂತೆ ಸೇವಾಭಾರತೀಯು ಮಾಡಿರುತ್ತದೆ.
- ಶಿಬಿರಕ್ಕೆ ಆಗಮಿಸುವವರು ದಿನಾಂಕ 03 ಸಪ್ಟೆಂಬರ್ ಸಮಯ 9.30 ಗಂಟೆಯ ಒಳಗೆ ಜಿಲ್ಲಾ ಆಸ್ಪತ್ರೆ, ಅಜ್ಜರಕಾಡು ಉಡುಪಿಗೆ ಬರತಕ್ಕದ್ದು.
- ತಮಗೆ ಸಂಬಂಧ ಪಟ್ಟ ವೈದ್ಯಕೀಯ ರಿಪೋರ್ಟ್ (medical report), ಆಧಾರ್ ಕಾರ್ಡ್, UDID ಕಾರ್ಡ್ ಮತ್ತು 3 ದಿನ ಉಪಯೋಗಿಸುವ ಬಟ್ಟೆ, ಮೆಡಿಸಿನ್ಸ್, ಸೋಪ್, ಟೂತ್ ಪೇಸ್ಟ್ ಮತ್ತು ದಿನನಿತ್ಯ ಉಪಯೋಗಿಸುವ ವಸ್ತುಗಳನ್ನು ತರತಕ್ಕದು.
- Bedsheet, ಛತ್ರಿ, ನೀರಿನ ಬಾಟಲಿ, catheters, ಡೈಪರ್ಸ್ (ಬಳಸುತ್ತಿದ್ದಲ್ಲಿ), ತರತಕ್ಕದ್ದು.
- ಫಲಾನುಭವಿಗಳೊಂದಿಗೆ ಆರೈಕೆದಾರರೂ (care takers) ಕೂಡ ಬರಬೇಕು.(ಒಬ್ಬರೇ ಇರಲು ಸಾಧ್ಯವಿದ್ದಲ್ಲಿ ಆಕ್ಷೇಪವಿಲ್ಲ)
- 3 ದಿನಗಳ ಕಾಲ ಊಟ ಮತ್ತು ಇತರೆ ಬೇಕಾದ ಅಗತ್ಯತೆಗಳ ವ್ಯವಸ್ಥೆ ಮಾಡಿದ್ದು ಶಿಬಿರ ಮುಗಿಯುವ ತನಕ ಯಾರು ಹಿಂತಿರುಗುವಂತಿಲ್ಲ (ಸಮಸ್ಯೆ ಇದಲ್ಲಿ ತಿಳಿಸಬಹುದು).
- ವೈದ್ಯರ ಭೇಟಿ ಸಮಯದಲ್ಲಿ ತೊಂದರೆಗಳನ್ನು ವಿವರವಾಗಿ ತಿಳಿಸಿ ಉತ್ತರಗಳನ್ನು ಪಡೆದುಕೊಳ್ಳಬೇಕು.
- ತಾವುಗಳು ಮನೆಯಿಂದ ಹೊರಡುವ ಮುನ್ನ ನಿತ್ಯ ಕರ್ಮ ಮುಗಿಸಿ ಬರಬೇಕು. ಇವುಗಳ ಅವಶ್ಯಕತೆ ಶಿಬಿರದಲ್ಲಿ ಕಡಿಮೆ ಬರುವಂತೆ ನೋಡಿಕೊಳ್ಳಿ. 8 3 ದಿನದ ಶಿಬಿರದಲ್ಲಿ ಸೇವಾಧಾಮದ ಸಂಸ್ಥಾಪಕರಾದ ಕೆ. ವಿನಾಯಕ್ ರಾವ್ ಹಾಗೂ ಪುನಶ್ಚೇತನಗೊಂಡ ದಿವ್ಯಾಗರು ಮತ್ತು ಸೇವಾಭಾರತಿಯ ಸಿಬ್ಬಂದಿಗಳು ತಮಗಾಗಿ ಪಾಲ್ಗೊಳ್ಳುತ್ತಿದು, ಪ್ರಶ್ನೆಗಳು, ತೊಂದರೆಗಳು ಇದಲ್ಲಿ ಇವರೊಂದಿಗೆ ಚರ್ಚಿಸಬಹುದು.
ಈ ಶಿಬಿರವು ತಮಗಾಗಿ ಆಯೋಜಿಸಿದ್ದು, ತಪ್ಪದೇ ಶಿಬಿರದಲ್ಲಿ ಪಾಲ್ಗೊಂಡು ಸಂಪೂರ್ಣ ಫಲನುಭವವನ್ನು ತಾವುಗಳು ಪಡೆದುಕೊಳ್ಳಬೇಕು.ವೈದ್ಯಕೀಯ ತಪಾಸಣೆಯ ಬಳಿಕ ವಸತಿಗಾಗಿ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉಡುಪಿಯಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.