Friday, May 16, 2025
Homeಉಡುಪಿಉಡುಪಿ : ಸಂಸ್ಥಾಪಕರ  ದಿನ ಆಚರಣೆ

ಉಡುಪಿ : ಸಂಸ್ಥಾಪಕರ  ದಿನ ಆಚರಣೆ

ಉಡುಪಿ ಬೈಲೂರು  ವಾಸು ದೇವ ಕೃಪಾ ವಿದ್ಯಾಮಂದಿರ ಶಾಲೆಯಲ್ಲಿ  ಜುಲೈ 03 2024 ರಂದು ಸಂಸ್ಥಾಪಕರ  ದಿನವನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ನ ಸೆಕ್ರೆಟರಿ ಶ್ರೀ ವಾರದಾರಯ ಪೈ ಅವರು ಆಗಮಿಸಿ  ಸಂಸ್ಥಾಪಕರ ದಿನದ ಕುರಿತು ಮಾತನಾಡುತ್ತಾ ಟಿ. ಮ್. ಎ ಪೈ ಗಳ ಕೊಡುಗೆಗಳು ಹಾಗೂ ಅವರ ವಿಚಾರದಾರೆಯ ಬಗ್ಗೆ ಮಕ್ಕಳಿಗೆ ತಿಳಿಸಿದರು.

ಮುಖ್ಯ ಶಿಕ್ಷಕಿ ಶ್ರೀಮತಿ ನಿಷಾ ಸಂಸ್ಥಾಪಕರ ದಿನದ ಮಹತ್ವದ ಕುರಿತು ಮಾತನಾಡಿದರು. ಸಭಾ ಕಾರ್ಯಕ್ರಮ ದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ವಿದ್ಯಾರ್ಥಿನಿಯರಾದ ಕುಮಾರಿ ಪರ್ವದಿ ಕಾರ್ಯಕ್ರಮವನ್ನು ನಿರೂಪಿಸಿ, ಕುಮಾರಿ ಧನ್ಯ ಸ್ವಾಗತಿಸಿ  ಕುಮಾರಿ ರೀತು ವಂದನಾರ್ಪಣೆ ಮಾಡಿದರು.

RELATED ARTICLES
- Advertisment -
Google search engine

Most Popular