Saturday, July 20, 2024
Homeಉಡುಪಿಉಡುಪಿ ಗ್ಯಾಂಗ್ ವಾರ್ : ಮತ್ತೆ ಮೂವರ ಬಂಧನ

ಉಡುಪಿ ಗ್ಯಾಂಗ್ ವಾರ್ : ಮತ್ತೆ ಮೂವರ ಬಂಧನ

ಉಡುಪಿ: ಉಡುಪಿ ಕುಂಜಿಬೆಟ್ಟುವಿನಲ್ಲಿ ಇತ್ತೀಚೆಗೆ ಗರುಡ ಗ್ಯಾಂಗ್ ಮಧ್ಯೆ ನಡೆದ ಗ್ಯಾಂಗ್‌ವಾರ್‌ಗೆ ಸಂಬಂಧಿಸಿ ಮತ್ತೆ ಮೂವರು ಆರೋಪಿಗಳನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಗರುಡ ಗ್ಯಾಂಗ್ ನ ಮಜೀದ್, ಅಲ್ಫಾಝ್, ಶರೀಫ್ ಎಂದು ಗುರುತಿಸಲಾಗಿದೆ. ಆ ಮೂಲಕ‌ ಬಂಧಿತ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ. ಈ ಪ್ರಕರಣದಲ್ಲಿ ಮೇ 20ರಂದು ಪ್ರಮುಖ ಆರೋಪಿ ಕಾಪು ಕೊಂಬಗುಡ್ಡೆ ಮೂಲದ ಆಶಿಕ್(26), ತೋನ್ಸೆ ಹೂಡೆಯ ರಾಕೀಬ್(21) ಹಾಗೂ ಮೇ 25ರಂದು ಸಕ್ಲೈನ್(26) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಕಾರ್ಯಾಚರಣೆ ತೀವ್ರಗೊಳಿಸಿದ ಪೊಲೀಸರು ಮತ್ತೆ ಮೂವರನ್ನು ಬಂಧಿಸಿದ್ದಾರೆ.

ಬಂಧಿತ ಮೂವರಲ್ಲಿ ವಿಡಿಯೋದಲ್ಲಿ ಕಾಣುವ ಕಾರು ಢಿಕ್ಕಿ ಹೊಡೆದು ಗಾಯಗೊಂಡ ಶರೀಫ್ ಎಂಬಾತ ಕೂಡ ಇದ್ದಾನೆ. ಈತನಿಗೆ ಗಾಯಗಳಾಗಿದ್ದು, ಈಗಾಗಲೇ ಚಿಕಿತ್ಸೆ ಪಡೆದುಕೊಂಡಿದ್ದಾನೆ ಎಂದು ತಿಳಿದುಬಂದಿದೆ.

RELATED ARTICLES
- Advertisment -
Google search engine

Most Popular