ಉಡುಪಿ: ಸಂಗೀತ ಕಲೆಯು ಮನುಷ್ಯನ ಎಲ್ಲಾ ದುಃಖ ಗಳನ್ನು ದೊರ ಮಾಡುವ ಶಕ್ತಿ ಹೊಂದಿದೆ. ಸಂಗೀತ ಅಭ್ಯಾಸ ದಿಂದ ಅರೋಗ್ಯ ವೃದ್ಧಿ, ನೆಮ್ಮದಿ ದೊರೆಯುತ್ತದೆ. ಕಲೆಗಾರ ಬದುಕಿದರೇ ಕಲೆ ಉಳಿಯುತ್ತದೆ, ಯುವ, ಬಾಲ ಪ್ರತಿಭೆಗಳಿಗೆ ಈ ಸಂಸ್ಥೆ ಆಸರೆಯಾಗಲಿ ಎಂದು ಉಡುಪಿ ಕಡಿಯಾಳಿಯಲ್ಲಿಇಂದು ನೂತನವಾಗಿ ಆರಂಭಗೊಂಡ ಹವಾನಿಯಂತ್ರಿತ ” ಸ್ಟಾರ್ ಮ್ಯೂಸಿಕ್ ಕೋಸ್ಟಲ್ ಸ್ಟುಡಿಯೋ “ದೀಪ ಬೆಳಗಿಸಿ ಉದ್ಘಾಟಿಸಿ ಕುಂದಾಪುರ ಕಲಾಕ್ಷೇತ್ರದ ಕಿಶೋರ್ ಕುಮಾರ್ ಮಾತನಾಡಿ ಶುಭ ಹಾರೈಸಿದರು. ಸಂಗೀತ ವಿದ್ವಾನ್ ಗುರುದಾಸ್ ಶೆಣೈ ಮಾತನಾಡಿ ಇಲ್ಲಿ ಕಲಿಸುವ ಹಿಂದೂಸ್ತಾನಿ , ಕರ್ನಾಟಕ , ಕ್ಲಾಸಿಕಲ್ ಸಂಗೀತದ ಕಲೆಯ ಬೆಳವಣಿಗೆ ಆಧುನಿಕ ಶೈಲಿಯ ಸ್ಟುಡಿಯೋ ಅಗತ್ಯ ಹಾಗೂ ಮಹತ್ವ ತಿಳಿಸಿದರು. ಖ್ಯಾತ ಗಾಯಕರಾದ ರವೀಂದ್ರ ಪ್ರಭು ಮಾತನಾಡಿ ಇಲ್ಲಿನ ಕಲಾವಿದರು ಸ್ಥಳೀಯ ಆರ್ಕೆಸ್ಟ್ರಾ ಗಳಲ್ಲಿ ಹಾಡಿ ಉತ್ತಮ ಹೆಸರು ಹೊಂದಿದ್ದಾರೆ. ನೂರಾರು ಯುವ ಪ್ರತಿಭೆಗಳು ಈ ಸಂಸ್ಥೆಯ ಮುಖಾಂತರ ಬೆಳೆದು ನಾಡಿಗೆ ಕೀರ್ತಿ ತರಲಿ ಶುಭ ಹಾರೈಸಿದರು. ಸ್ಥಾಪಕರಾದ ಪ್ರಕಾಶ್ ಕಾಮತ್ ಮಾತನಾಡುತ್ತಾ ” ಕೋಸ್ಟಲ್ ಸ್ಟಾರ್ ಮ್ಯೂಸಿಕ್ ಕ್ಲಾಬ್ ” ಮಣಿಪಾಲ ಹತ್ತಾರು ಸಮಾನ ಮನಸ್ಕರ ಸಹಕಾರದಲ್ಲಿ ಕಲೆಗೆ ಪ್ರೋತ್ಸವ , ಯುವ ಪ್ರತಿಭೆಗಳಿಗೆ ತರಬೇತಿ ನೀಡುವ ಉದ್ದೇಶ ದಿಂದ ” ಸ್ಟಾರ್ ಮ್ಯೂಸಿಕ್ ಕೋಸ್ಟಲ್ ಸ್ಟುಡಿಯೋ ” ಸ್ಥಾಪನೆ ಮಾಡಿದ್ದೇವೆ ಇದರಲ್ಲಿ ಮಕ್ಕಳಿಗೆ ತಬಲಾ ,ಹಾರ್ಮೊನಿಯೋಮ್ , ಗಿಟಾರ್ , ಕೊಳಲು, ವಿವಿಧ ರೀತಿಯ ಸಂಗೀತ ತರಬೇತಿ ನೀಡಲಾಗುವುದು. ಪ್ರತಿ ವಾರ ಸಂಸ್ಥೆಯ ಸದಸ್ಯರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ಸಮಾರಂಭದಲ್ಲಿ ಟಿ ರಂಗ ಪೈ, ಶ್ರುತಿ ಶಣೈ ,ಶಾಲಿನಿ ವಿಜೇಂದ್ರ , ಹಲವು ಗಣ್ಯರು ಉಪಸ್ಥಿತರಿದ್ದರು. ಕಲಾವಿದ ಸತೀಶ್ಚಂದ್ರ ಸ್ವಾಗತಿಸಿದರು, ಅಮಿತಾಂಜಲಿ ಕಿರಣ್ ಕಾರ್ಯ ನಿರೂಪಣೆಗೈದರು. ಪ್ರಕಾಶ್ ಕಾಮತ್ ರವರು ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ವಿದ್ವಾನ್ ಗುರುದಾಸ್ ಶೆಣೈ, ಹಿನ್ನೆಲೆ ಗಾಯಕ ರವೀಂದ್ರಪ್ರಭು , ದೇವಾನಂದ ಗಾಂವ್ಕರ್, ಶ್ರೀನಿವಾಸ ಭಾಗವತ್ ಮತ್ತು ರೋಹಿತ್ ಕಾಮತ್ ಇವರುಗಳ “ಭಜನಾಮೃತ” ನೇರವೇರಿತು . ಕೋರ್ ಕಮಿಟಿಯ ಸದಸ್ಯರು ಹಾಗೂ ಕ್ಲಬ್ ನ ಸದಸ್ಯರು ,ಸಂಗೀತ ಅಭಿಮಾನಿಗಳು ಉಪಸ್ಥಿತರಿದ್ದರು .