Thursday, September 12, 2024
Homeಉಡುಪಿಜೆಡಿಎಸ್‌ ಕಾರ್ಯಾಧ್ಯಕ್ಷೆ ಎಂದು ಹೇಳಿಕೊಂಡು 8 ಮದುವೆಯಾಗಿ, ಕೋಟಿ ಕೋಟಿ ವಂಚಿಸಿದ ಮಹಿಳೆ | ಉಡುಪಿ...

ಜೆಡಿಎಸ್‌ ಕಾರ್ಯಾಧ್ಯಕ್ಷೆ ಎಂದು ಹೇಳಿಕೊಂಡು 8 ಮದುವೆಯಾಗಿ, ಕೋಟಿ ಕೋಟಿ ವಂಚಿಸಿದ ಮಹಿಳೆ | ಉಡುಪಿ ಮಹಿಳೆಯ ಖತರ್ನಾಕ್‌ ಸ್ಟೋರಿ ಕೇಳಿದರೆ ಬೆಚ್ಚಿಬೀಳುತ್ತೀರಿ!

ಉಡುಪಿ: ಜೆಡಿಎಸ್‌ ಅಲ್ಪಸಂಖ್ಯಾತರ ಘಟಕದ ರಾಜ್ಯ ಕಾರ್ಯಾಧ್ಯಕ್ಷೆ ಎಂದು ಹೇಳಿಕೊಂಡು, ಹಲವರನ್ನು ಮದುವೆಯಾಗಿ ವಂಚಿಸಿದ ಪ್ರಕರಣ ಬಳ್ಳಾರಿಯಲ್ಲಿ ಬೆಳಕಿಗೆ ಬಂದಿದೆ. ಅಲ್ಲದೆ, ಹಲವಾರು ಜನರಿಗೆ ಲೋನ್‌ ಕೊಡಿಸುವುದಾಗಿಯೂ ಮಹಿಳೆ ವಂಚಿಸಿರುವ ಆರೋಪ ಕೇಳಿಬಂದಿದೆ.
ಉಡುಪಿ ನಿವಾಸಿ ತಬುಸುಮ್‌ ತಾಜ್‌ (40) ಎಂಬಾಕೆ ಇದುವರೆಗೆ ಎಂಟು ಜನರನ್ನು ವಿವಾಹವಾಗಿ ವಂಚಿಸಿದ್ದಾಳೆ ಎನ್ನಲಾಗಿದೆ. ಮದುವೆಯಾಗಿ ಹೆಂಡತಿಯಿಂದ ದೂರ ಇರುವ ಹಣ ಹೊಂದಿರುವ ಗಂಡಸರನ್ನೇ ಟಾರ್ಗೆಟ್‌ ಮಾಡಿ ಈಕೆ ವಂಚಿಸಿದ್ದಾಳೆ ಎನ್ನಲಾಗಿದೆ.
ಹೀನಾ ಎಂಟರ್‌ಪ್ರೈಸಸ್‌ ಎಂಬ ಕಚೇರಿ ಮಾಡಿಕೊಂಡು ಮುದ್ರಾ ಲೋನ್‌, ಸರ್ಕಾರಿ ನೌಕರಿ, ಮೈನಾರಿಟಿ ಲೋನ್‌, ವಿದ್ಯಾರ್ಥಿಗಳ ಸ್ಕಾಲರ್ಶಿಪ್‌ ಕೊಡಿಸುತ್ತೇನೆ ಎಂದು ಹೇಳಿಕೊಂಡಿದ್ದಾಳೆ. 18 ವರ್ಷದಿಂದ ಇದನ್ನೇ ಬ್ಯುಸಿನೆಸ್‌ ಮಾಡಿಕೊಂಡಿರುವ ಈಕೆ, ಯು.ಟಿ. ಖಾದರ್‌ ಬಳಿ ಬ್ಲಾಕ್‌ ಮನಿ ಇದೆ, ಅದನ್ನು ವೈಟ್‌ ಮಾಡಲು ಈ ಬ್ಯುಸಿನೆಸ್‌ ಮಾಡುತ್ತಿದ್ದೇವೆ ಎಂದೆಲ್ಲಾ ಸುಳ್ಳು ಹೇಳಿ ಜನರನ್ನು ನಂಬಿಸಿರುವುದಾಗಿ ವರದಿಯೊಂದು ತಿಳಿಸಿದೆ.
1 ಕೋಟಿ ಲೋನ್‌ ಬೇಕಾದರೆ 15 ಲಕ್ಷ ಕೊಡಬೇಕು ಎಂದು ಬೇಡಿಕೆ ಇಡುತ್ತಿದ್ದಳು. 10 ದಿನದಲ್ಲಿ ಲೋನ್‌ ಕೊಡಲಾಗುತ್ತದೆ ಎಂಬ ಭರವಸೆ ನೀಡಿ ವಂಚಿಸುತ್ತಿದ್ದಳು. ರಾಜ್ಯಾದ್ಯಂತ 38 ಕೋಟಿ ರೂ.ಗೂ ಹೆಚ್ಚು ಹಣ ಸಾವಿರಾರು ಜನರಿಗೆ ಈಕೆ ವಂಚಿಸಿದ್ದಾಳೆ ಎನ್ನಲಾಗಿದೆ.
ಹಣ ವಾಪಾಸ್‌ ಕೇಳುವವರಿಗೆ ಕ್ರಿಮಿನಲ್‌ ಲಾಯರ್‌ ಮೂಲಕ ಕೇಸು ದಾಖಲಿಸುವ ಭಯ ಹುಟ್ಟಿಸುತ್ತಿದ್ದಳು. ಅಲ್ಲದೆ, ಚೆಕ್‌ ಬರೆಸಿಕೊಂಡು ಚೆಕ್‌ ಬೌನ್ಸ್‌ ಕೇಸ್‌ ದಾಖಲಿಸುವ ಬೆದರಿಕೆಯನ್ನೂ ಒಡ್ಡುತ್ತಿದ್ದಳು ಎಂಬ ದೂರುಗಳು ಕೇಳಿಬಂದಿವೆ. ಈಕೆಯ ವಂಚನೆ ತಿಳಿದು ಆರನೇ ಗಂಡ ರಾಜಾ ಹುಸೇನ್‌ ಎಂಬಾತ ಪ್ರಶ್ನಿಸಿದ್ದು, ಆತನ ಮೇಲೂ ಕೇಸ್‌ ದಾಖಲಿಸುವ ಬೆದರಿಕೆಯೊಡ್ಡಿದ್ದಳು ಎನ್ನಲಾಗಿದೆ. ಮಹಿಳೆಯ ವಿರುದ್ಧ ರಾಜ್ಯದ ವಿವಿಧೆಡೆ ವಂಚನೆ ಕೇಸ್‌ ದಾಖಲಾಗಿದೆ ಎಂದು ವರದಿಯೊಂದು ತಿಳಿಸಿದೆ.

RELATED ARTICLES
- Advertisment -
Google search engine

Most Popular