Wednesday, September 11, 2024
HomeUncategorizedಉಡುಪಿ : ಲಯನ್ಸ್ ಕ್ಲಬ್ ಉಡುಪಿ ಚೇತನದ ಪದಪ್ರಧಾನ ಸಮಾರಂಭ

ಉಡುಪಿ : ಲಯನ್ಸ್ ಕ್ಲಬ್ ಉಡುಪಿ ಚೇತನದ ಪದಪ್ರಧಾನ ಸಮಾರಂಭ

ಲಯನ್ಸ್ ಕ್ಲಬ್ ಉಡುಪಿ ಚೇತನದ ಪದಪ್ರಧಾನ ಸಮಾರಂಭವು ಇತ್ತೀಚೆಗೆ ಉಡುಪಿಯ ಅಜ್ಜರಕಾಡಿನಲ್ಲಿರುವ ಟೌನ್ ಹಾಲ್ ಮಿನಿ ಹಾಲ್ ನಲ್ಲಿ ಜರಗಿತು. ಪದಪ್ರಧಾನ ಅಧಿಕಾರಿಯಾಗಿ ಲಯನ್ಸ್ ನ ಮಾಜಿ ಜಿಲ್ಲಾ ಗವರ್ನರ್ ಲಯನ್ ವಿ ಜಿ ಶೆಟ್ಟಿಯವರು ನೂತನ ಅಧ್ಯಕ್ಷ ಲಯನ್ ಪುಷ್ಪರಾಜ್ ಶೆಟ್ಟಿ ಹಾಗೂ ಅವರ ತಂಡಕ್ಕೆ ಪ್ರತಿಜ್ಞಾ ವಿಧಿಯನ್ನು ಭೋಧಿಸಿದರು. ಮುಖ್ಯ ಅತಿಥಿಯಾಗಿ ಮಾಜಿ ಜಿಲ್ಲಾ ಗವರ್ನರ್ ಲಯನ್ ಜಯಕರ ಶೆಟ್ಟಿ ಇಂದ್ರಾಳಿಯವರು ಲಯನ್ಸ್ ಕ್ಲಬ್ ಉಡುಪಿ ಚೇತನದ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಲಿಯೋ ಸದಸ್ಯೆಯರಾದ ದೀಪಾಲಿ ಹಾಗೂ ಅನನ್ಯ ಇವರಿಬ್ಬರನ್ನು ಸನ್ಮಾನಿಸಲಾಯಿತು. ಆರ್ಥಿಕವಾಗಿ ಹಿಂದುಳಿದ ಒಬ್ಬ ಪ್ರತಿಭಾವಂತ ವಿದ್ಯಾರ್ಥಿಗೆ ಮುಂದಿನ ವಿದ್ಯಾರ್ಜನೆಗೆ ಆರ್ಥಿಕ ಸಹಾಯವನ್ನು ನೀಡಲಾಯಿತು. ಹಾಗೇ ಅನಾರೋಗ್ಯದಿಂದ ಬಳಲುತ್ತಿದ್ದ ಓರ್ವರಿಗೆ ಧನ ಸಹಾಯ ನೀಡಲಾಯಿತು ಮತ್ತು ವೈದ್ಯರ ದಿನಾಚರಣೆಯ ಪ್ರಯುಕ್ತ  ನಮ್ಮ ಕ್ಲಿನಿಕ್ ವೈದ್ಯರಾದ ಡಾ  ಪೂಜಿತಾ ಶೆಟ್ಟಿ  ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಇಬ್ಬರು ನೂತನ ಸದಸ್ಯರನ್ನು ಕ್ಲಬ್ ಗೆ ಸೇರಿಸಿಗೊಳ್ಳಲಾಯಿತು. ಪ್ರಾಂತೀಯ ಅಧ್ಯಕ್ಷರಾದ ಲಯನ್ ವಿ ಎಸ್ ಉಮ್ಮರ್ ಹಾಗೂ ವಲಯಾಧ್ಯಕ್ಷರಾದ  ಲಯನ್ ಜಗದೀಶ್ ಆಚಾರ್ಯ ಪೆರಂಪಳ್ಳಿಯವರು ಶುಭಾಸಂಶನೆಯನ್ನು ಗೈದರು. ಲಯನ್ ನಿಖಿಲಾ ಶೆಟ್ಟಿ ಯವರು ಪ್ರಾರ್ಥನೆ ಗೈದು ನಿಕಟಪೂರ್ವ ಅಧ್ಯಕ್ಷ ಲಯನ್ ಜಗದೀಶ್ ಆಚಾರ್ಯ ಪೆರಂಪಳ್ಳಿ ಯವರು ಸ್ವಾಗತಿಸಿ ನೂತನ ಕಾರ್ಯದರ್ಶಿ ಲಯನ್ ಅಭಿಜಿತ್ ಸುವರ್ಣರವರು ಧನ್ಯವಾದ ಸಮರ್ಪಣೆ ಗೈದರು. ಮಾಜಿ ಅಧ್ಯಕ್ಷರಾದ ಲಯನ್ ಪ್ರದೀಪ್ ಶೆಟ್ಟಿ ಕರ್ಜೆ ಹಾಗೂ ಲಯನ್ ರತ್ನಾಕರ್ ಶೆಟ್ಟಿ ಯವರು ಕಾರ್ಯಕ್ರಮ ನಿರೂಪಿಸಿದರು. ನೂತನ ಕೋಶಾಧಿಕಾರಿ ಲಯನ್ ಮನೋಜ್ ಶೆಟ್ಟಿ ಹಾಗೂ ಮಾಜಿ ಅಧ್ಯಕ್ಷರಾದ ಲಯನ್ ಪ್ರವೀಣ್ ಕುಮಾರ್ ರವರು ಈ ಕಾರ್ಯಕ್ರಮದ ಸಂಯೋಜಕರಾಗಿದ್ದರು.

RELATED ARTICLES
- Advertisment -
Google search engine

Most Popular