ಉಡುಪಿ: ಕಳೆದ ರಾತ್ರಿ ಸುರಿದ ಮಳೆಯ ಪರಿಣಾಮ ಉಡುಪಿಯ ತರಕಾರಿ ಮಾರುಕಟ್ಟೆ ಬಳಿಯ ಮರವೊಂದರ ಕೊಂಬೆ ಇಂದು ಮಧ್ಯಾಹ್ನ ಮುರಿದು ಬಿದ್ದಿದೆ. ನಗರದ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣದ ಸಮೀಪ ಇರುವ ಮಾರುಕಟ್ಟೆಯಲ್ಲಿನ ಮರದ ಕೊಂಬೆ ಮುರಿದು ಬಿದ್ದಿದೆ. ಘಟನೆಯಿಂದಾಗಿ ಎರಡು ಅಂಗಡಿಗಳು ಮತ್ತು ಒಂದು ಕಾರಿಗೆ ಹಾನಿಯಾಗಿದೆ. ಮಾರುಕಟ್ಟೆಯಲ್ಲಿನ ಶಫೀಕ್ ಮತ್ತು ಮುಸ್ತಫ ಎಂಬವರ ಅಂಗಡಿಗಳಿಗೆ ಹಾನಿಯುಂಟಾಗಿದೆ. ಶಫೀಕ್ ಅವರ ತರಕಾರಿ ಅಂಗಡಿ, ಮುಸ್ತಫ ಅವರ ಹಣ್ಣಿನ ಅಂಗಡಿಗೆ ಹಾನಿಯಾಗಿದೆ. ಗ್ರಾಹಕರೊಬ್ಬರ ಕಾರು ಜಖಂಗೊಂಡಿದೆ.