ಇಲ್ಲಿನ ದೇವಾಲಯಕ್ಕೆ ಶ್ರೀ ಕೃಷ್ಣ ಮಠಕ್ಕೆ ವಿಶೇಷವಾದ ಸಂಬಂಧವಿದ್ದು ಭಕ್ತರೊ ದೇವಸ್ಥಾನದ ಅಭಿವೃದ್ಧಿ ಅದರ ಧಾರ್ಮಿಕ ಕಾರ್ಯಗಳಲ್ಲಿ ಶ್ರದ್ದಾ ಭಕ್ತಿಯಿಂದ ಎಲ್ಲರೂ ಭಾಗವಹಿಸಿದ್ದಾಗ ಭಗವಂತ ಸಾನಿಧ್ಯ ಶಕ್ತಿ ವೃದ್ಧಿಯಾಗಿ ಊರಿಗೆ ಮಂಗಳಾ ಗುವುದು . ದೇವಿಯ ಅನುಗ್ರಹದ ಪೂರ್ಣ ಫಲ ದೊರೆಯುತ್ತದೆ. ಶತಚಂಡಿಕಾಯಾಗದಂತ ದೇವತಾ ಕಾರ್ಯ ಮಾಡುವುದರಿಂದ ಕಾಲ ಕಾಲಕ್ಕೆ ಮಳೆ ಬೆಳೆಯಾಗುತ್ತದೆ. ಇದರಿಂದ ಭೂಮಿಯಲ್ಲಿ ಜೀವರಾಶಿಗಳು ಸುಖವಾಗಿ , ನೆಮ್ಮದಿಯಿಂದ ಜೀವಿಸಬಹುದು ಇದರಿಂದ ಲೋಕ ಕಲ್ಯಾಣ ವಾಗುವುದು ಎಂದು ಶ್ರೀ ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಅನುಗ್ರಹಿಸಿದರು ಆ. 28ರಂದು ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಡಿ .9 ರಿಂದ ಡಿ 15ರವರೆಗೆ ನಡೆಯುವ ಶತಚಂಡಿಕಾಯಾಗ ಮತ್ತು ಬ್ರಹ್ಮಮಂಡಲ ಸೇವೆಯ ವಿಜ್ಞಾಪನ ಪತ್ರವನ್ನು ದೇವಸ್ಥಾನದ ಸಭಾಂಗಣ ದಲ್ಲಿ ಬಿಡುಗಡೆಗೊಳಿಸಿ , ಈ ಯಜ್ಞವು ಸಾಂಗವಾಗಿ ನೆರವೇರಲಿ ಎಂದು ಆಶೀರ್ವಚನ ನೀಡಿದರು. ಉಡುಪಿ ಶಾಸಕರಾದ ಯಶಪಾಲ್ ಎ. ಸುವರ್ಣ ಮಾತನಾಡಿ ದೇವಳದ ಧಾರ್ಮಿಕ ಕಾರ್ಯಕ್ಕೆ ಹಾಗೂ ದೇವಸ್ಥಾನದ ಕೆರೆ ಅಭಿವೃದ್ಧಿಗೆ ನಗರ ಸಭೆ , ನಗರಾಭಿವೃದ್ಧಿ ಪ್ರಾಧಿಕಾರ ಸರಕಾರದ ವತಿಯಿಂದ ಅನುದಾನ ಬಿಡುಗಡೆ ಮಾಡಲು ಪ್ರಯತ್ನಿಸುತೇನೆ ಎಂದರು. ಶತ ಚಂಡಿಕಾಯಾಗ ಸಮಿತಿ ಅಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆ ಮಾತನಾಡಿ ಶ್ರೀ ನಾಗದೇವರ ಸನ್ನಿದಿಯಲ್ಲಿ ಬ್ರಹ್ಮ ಮಂಡಲ ಪೂಜೆ ಹಾಗೂ ದೇವಿಯ ಸನ್ನಿಧಿಯಲ್ಲಿ ಮೊದಲ ಬಾರಿಗೆ 1 ಸಾವಿರ ಮಹಿಳೆಯರಿಂದ ಶ್ರೀದೇವಿಗೆ ದುರ್ಗಾ ಆರತಿ , 100 ಭಕ್ತರಿಂದ ಶತ ಚಂಡಿಕಾ ಯಾಗ ಸಂಕಲ್ಪ ಪೂಜೆಯಲ್ಲಿ ಭಾಗವಹಿಸುವ ಭಕ್ತರಿಗೆ ಶ್ರೀಪಾದರು ಅನುಗ್ರಹ ವಿತರಿಸಿದರು ಬಡಗುಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ಬಿ. ಜಯಕರ್ ಶೆಟ್ಟಿ ಇಂದ್ರಾಳಿ,ದೇವಸ್ಥಾನದ ತಂತ್ರಿ ಕೆ.ಸ್. ಕೃಷ್ಣಮೂರ್ತಿ , ಶತ ಚಂಡಿಕಾಯಾಗ ಮತ್ತು ಬ್ರಹ್ಮಮಂಡಲ ಸಮಿತಿ ಅಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆ, ಕೋಶಾಧಿಕಾರಿ ಸುದರ್ಶನ್ ಶೇರಿಗಾರ್ , ಪವಿತ್ರಪಾಣಿ ಶ್ರೀನಿವಾಸ್ ಆಚಾರ್ಯ , ಅರ್ಚಕ ವರದರಾಜ್ ಭಟ್ , ನಗರ ಸಭೆ ಸದಸ್ಯ ಕೃಷ್ಣರಾವ್ ಕೊಡಂಚ , ಆರ್ಥಿಕಸಮಿತಿ ಸಂಚಾಲಕ ರಮೇಶ್ ಶೆಟ್ಟಿ ಕಳ್ಳತ್ತೂರು , ಸಮಿತಿಯ ಪಧಾದಿಕಾರಿಗಳು ಉಪಸ್ಥಿತರಿದ್ದರು. , ಕಾರ್ಯದರ್ಶಿ ನಾರಾಯಣ ದಾಸ್ ಉಡುಪ ಸ್ವಾಗತಿಸಿದರು. ಪ್ರವೀಣ್ ಕುಮಾರ್ ಬೈಲೂರು ಕಾರ್ಯಕ್ರಮದ ನಿರೂಪಣೆ ಮಾಡಿದರು. ದುರ್ಗಾದಾಸ್ ವಂದನಾರ್ಪಣೆ ಮಾಡಿದರು