ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ತೆಂಕಪೇಟೆ 124ನೇ ಭಜನಾ ಸಪ್ತಾಹ ಭಜನಾ ಮಹೋತ್ಸವದ 6 ದಿನದ ಅಂಗವಾಗಿ ಗುರುವಾರ ಶ್ರೀದೇವರಿಗೆ “ಗರುಡ ವಾಹನ” ಅಲಂಕಾರವನ್ನು ದೇವಳದ ಪ್ರಧಾನ ಅರ್ಚಕ ದಯಾಘನ ಭಟ್ ನೆರವೇರಿಸಿದರು.
ಶ್ರೀ ದೇವರ ಸನ್ನಿಧಿಯಲ್ಲಿ ವಿಶೇಷ ಹೂವಿನ ಅಲಂಕಾರ, ರಂಗಪೂಜೆಯ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆ, ಮಹಾ ಪೂಜೆಯ ಬಳಿಕ ಪ್ರಸಾದ ವಿತರಣೆಯಲ್ಲಿ ಸಾವಿರಾರು ಭಕ್ತರೂ ಪ್ರಸಾದ ಸ್ವೀಕರಿಸಿದರು. ದೇವಾಲಯವನ್ನು ಸಂಪೂರ್ಣ ವಿಶೇಷ ಹೂಗಳಿಂದ ಅಲಂಕಾರ ಮಾಡಲಾಗಿದ್ದು ಸಾವಿರಾರು ಭಕ್ತರೂ ಸರತಿ ಸಾಲಿನಲ್ಲಿ ಭೇಟಿ ನೀಡಿದರು.