ಉಡುಪಿ: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ತಾನ ತೆಂಕಪೇಟೆ ಉಡುಪಿ ,ಶತಮಾನೋತ್ತರ ರಜತ ಮಹೋತ್ಸವ 125 ವರ್ಷದ ಆಚರಣೆ ಪ್ರಯುಕ್ತ 125 ದಿನ ಅಹೋರಾತ್ರಿ ನಿರಂತರ ಭಜನಾ ಮೊಹೋತ್ಸವ ಹಾಗೂ ಯುಗಾದಿ ಹಬ್ಬದ ಪರ್ವಕಾಲದಲ್ಲಿ , ಭಜನಾ ಆರಾಧ್ಯ ದೇವರಾದ ವಿಠೋಭ ರುಖುಮಾಯಿ ಸನ್ನಿಧಿಯಲ್ಲಿ ಪುರಾಣ ಪ್ರಸಿದ್ಧ ” ಗಿಂಡಿನರ್ತನ ಸೇವೆ “ನಡೆಯಿತು.
ಗಿಂಡಿ ನರ್ತನ ಕಲಾವಿದರಾದ ನಾಡಾ ಸತೀಶ್ ನಾಯಕ್, ಶ್ರೀ ಚೇಂಪಿ ರಾಮಚಂದ್ರ ಅನಂತ ಭಟ್ ಉಡುಪಿ , ಪ್ರಶಾಂತ್ ಆಚಾರ್ಯ ಬಸ್ರುರು ಇವರು ಗಿಂಡಿನರ್ತನ ನೆಡೆಸಿಕೊಟ್ಟರು , ಹಿಮ್ಮೇಳನದ ಹಾಡುಗಾರಿಕೆಯಲ್ಲಿ ಸಗ್ರಿ ಗಣೇಶ್ ನಾಯಕ್ , ಸಗ್ರಿ ವಿನೀತ್ ನಾಯಕ್ , ಹಾರ್ಮೋನಿಯಂ ಪಾಂಡುರಂಗ ದತ್ತ ಕಿಣಿ , ತಬಲಾದಲ್ಲಿ ಜಯದೇವ್ ಭಟ್ ಕಲ್ಯಾಣಪುರ ಸಹಕರಿಸಿದರು. ದೇವಳದ ಪ್ರಧಾನ ಅರ್ಚಕರಾದ ವಿನಾಯಕ ಭಟ್, ಮುಕ್ತೇಸರ ಪಿ ವಿ ಶೆಣೈ ,ಹಾಗೂ ದೇವಳದ ಆಡಳಿತ ಮಂಡಳಿಯ ಸದಸ್ಯರು, ವಿವಿಧ ಭಜನಾ ಮಂಡಳಿಯ ಸದಸ್ಯರು ಜಿ ಎಸ್ ಬಿ ಮಹಿಳಾ ಮಂಡಳಿ ಸದಸ್ಯರು , ಯುವಕ ಮಂಡಳಿಯ ಸದಸ್ಯರು ನೂರಾರು ಸಮಾಜಭಾಂದವರು ಉಪಸ್ಥರಿದ್ದರು.
.