ಉಡುಪಿ: ಕರ್ನಾಟಕ ಸರಕಾರ ಮೂಲ ಸೌಲಭ್ಯ ಅಭಿವೃದ್ಧಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಕರ್ನಾಟಕ ಜಲಸಾರಿಗೆ ಮಂಡಳಿ ಉಪ ವಿಭಾಗ ಉಡುಪಿ ಇದರ ವತಿಯಿಂದ ಬಿಳ್ಕೋಡುಗೆ ಸಮಾರಂಭ ಶನಿವಾರ ಹೋಟೆಲ್ ಕಾರ್ತಿಕ್ ಎಸ್ಟೇಟ್ ಸಭಾಂಗಣದಲ್ಲಿ ಜರಗಿತು. ಸುಮಾರು 37 ವರ್ಷಗಳ ಕಾಲ ವಿವಿಧ ಹುದ್ದೆಯಲ್ಲಿ ಸೇವೆ ನೀಡಿ ವಯೋನಿವೃತ್ತಿ ಹೊಂದಿದ್ದ ನಾಗರಾಜ ಆರ್ ಕಾರ್ಯನಿರ್ವಾಹಕ ಇಂಜಿನಿಯರ್ , ಬಂದರು ಮತ್ತು ಮೀನುಗಾರಿಕಾ ವಿಭಾಗ ಉಡುಪಿ ಹಾಗೂ ಅವರ ಧರ್ಮಪತ್ನಿ ಜ್ಯೋತ್ಸ್ನಾ ರವರನ್ನು ನೂತನವಾಗಿ ಅಧಿಕಾರ ಸ್ವೀಕರಿಸಿದ ಪ್ರಸಾದ್ ಕಾರ್ಯನಿರ್ವಾಹಕ ಇಂಜಿನಿಯರ್ ಬಂದರು ಮತ್ತು ಮೀನುಗಾರಿಕಾ ವಿಭಾಗ ಕಾರವಾರ , ಇವರು ಶಾಲು ಹೊದಿಸಿ ಫಲ ಪುಷ್ಪ , ಸ್ಮರಣಿಕೆ ನೀಡಿ ಗೌರವಿಸಿದರು. ರಾಜೇಶ್ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಬಂದರು ಮತ್ತು ಮೀನುಗಾರಿಕಾ ಉಪ ವಿಭಾಗ ಮಂಗಳೂರು, ಗುತ್ತಿಗೆದಾರ ಸಂಘದ ಶ್ರೀನಾಥ್ , ಭಾನುಪ್ರಕಾಶ್ ಸಹಾಯಕ ಇಂಜಿನಿಯರ್ ಬಂದರು ಮತ್ತು ಮೀನುಗಾರಿಕಾ ಇಲಾಖೆ ಉಡುಪಿ , ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು, ಇಲಾಖೆಯ ಅಧಿಕಾರಿಗಳು , ಸಿಬ್ಬಂದಿಗಳು ಉಪಸ್ಥಿತರಿದ್ದರು. ನಿಧಿ ಪೈ ಕಾರ್ಯಕ್ರಮದ ನಿರೂಪಣೆಗೈದರು.