ಉಡುಪಿ: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಡೇರಿ ಚೌಕಿ ಸುಬ್ಬಯ್ಯ ಖಾರ್ವಿ ಇವರ ಮನೆಗೆ ಸ್ವಾತಂತ್ರ್ಯ ಹೋರಾಟಗಾರರ ಮನೆ ನಾಮ ಫಲಕ ಅನಾವರಣ
ಸ್ವರಾಜ್ಯ 75ತಂಡದ 29ನೇ ಸ್ವಾತಂತ್ರ್ಯ ಹೋರಾಟಗಾರರ ಮನೆ ನಾಮಫಲಕ ಅನಾವರಣ ಕಾರ್ಯಕ್ರಮ ಜೊತೆಯಾದ ರಾಷ್ಟ್ರೀಯ ಸೇವಾ ಯೋಜನೆ ಘಟಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರು ,ಹಸ್ತ ಚಿತ್ರ ಫೌಂಡೇಶನ್ ರಿಂದ ವಕ್ವಾಡಿ,ಜನಸೇವಾ ಟ್ರಸ್ಟ್ ಮೂಡುಗಿಳಿಯಾರು ,ಉಸಿರು ಕೋಟ, ನವಮಿ ಡಾಟ್ ಕಾಂ ಕೊಡೇರಿ, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಬೈಂದೂರು ತಾಲೂಕು ಘಟಕ ಕಾರ್ಯಕ್ರಮ ನಮ್ಮೊಂದಿಗೆ (“ಸ್ವರಾಜ್ಯ 75 ತಂಡದೊಂದಿಗೆ) ಯಶಸ್ವಿಗೊಳಿಸಲಾಯಿತು.
ಕಾರ್ಯಕ್ರಮದ ಚಾಲನೆಯನ್ನು ರಾಷ್ಟ್ರ ಧ್ವಜಕ್ಕೆ ಪುಷ್ಪಾರ್ಚನೆಯನ್ನು ಡಾ.ಲತಾ ಪೂಜಾರಿ ಇವರು ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕುಂದನಾಡು ಅಧ್ಯಯನ ಕೇಂದ್ರದ ಮುಖ್ಯಸ್ಥರು ಉಪ್ಪುಂದ ಚಂದ್ರಶೇಖರ ಹೊಳ್ಳ ನಾಮಫಲಕ ಅನಾವರಣ ಮಾಡಿದರು.
ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕರಾವಳಿಯರ ಕೊಡುಗೆಯೊಂದಿಗೆ ವಿಚಾರದ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀರಾಜ್ ಗುಡಿ ವಿಚಾರ ಹಂಚಿಕೊಂಡರು. ಕ್ರಾಂತಿವೀರ ಸಾವರ್ಕರ್ ಯಶೋಗಾಥೆಯ ವಿಚಾರವನ್ನು ಮನ್ವಿತಾ ಎಸ್. ಹಂಚಿಕೊಂಡರು.
ಗಣ್ಯರಾಗಿ ಪುಂಡಲೀಕ ನಾಯಕ್ ನಾಯ್ಕನಕಟ್ಟೆ,ಶಾಂತಿ ಗೋವಿಂದರಾಜ್, ವಿಠಲ್ ಖಾರ್ವಿ ಕೊಡೇರಿ,ವೆಂಕಟೇಶ್ ನಾವುಂದ,ವಿಜಯ ನರಸಿಂಹ ಐತಾಳ ವಿಚಾರ ಹಂಚಿಕೊಂಡರು
ಕಾರ್ಯಕ್ರಮ ಅಧ್ಯಕ್ಷತೆಯನ್ನು ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಶಿವರಾಮ್ ಖಾರ್ವಿ ,ಚಂದನ್ ಗೌಡ,ವಿಜಯ್ ಕೊಡೇರಿ , ರಾಷ್ಟ್ರೀಯ ಸೇವಾ ಯೋಜನೆ ಘಟಕ ವಿಧ್ಯಾರ್ಥಿ ಕುಟುಂಬಸ್ಥರು ಉಪಸ್ಥಿತರಿದ್ದರು.
ಪ್ರಾಸ್ತಾವಿಕ ವಿಚಾರವನ್ನು ಕಾರ್ಯಕ್ರಮ ಸಂಚಾಲಕರು ( ಸ್ವರಾಜ್ಯ 75) ಪ್ರದೀಪ ಕುಮಾರ್ ಬಸ್ರೂರು ವಿಚಾರ ರೂಪುರೇಷ ತಿಳಿಸಿದರು, ನಿರೂಪಣೆ ಹಾಗೂ ಸ್ವಾಗತವನ್ನು ರಕ್ಷಿತಾ, ಧನ್ಯವಾದವನ್ನು ಅಕ್ಷತಾ ಗಿರೀಶ್ ಐತಾಳ್ ನಡೆಸಿದರು.