ಉಡುಪಿ : ಕರ್ನಾಟಕ ಸರಕಾದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆಯ ಬಸ್ಸನ್ನು ಇಂದು ಬೆಳಿಗ್ಗೆ ಪಳ್ಳಿ- ನಿಂಜೂರು ರಸ್ತೆಯಲ್ಲಿ ಪಳ್ಳಿ ಗ್ರಾಮಸ್ಥರು ಬಸ್ಸಿಗೆ ಪೂಜೆ ಸಲ್ಲಿಸಿಸುವುದರ ಮೂಲಕ ಸ್ವಾಗತಿಸಿದರು, ಪಳ್ಳಿ ವೃತ್ತದಲ್ಲಿ ಮೊದಲೇ ಸೇರಿದ್ದ ಗ್ರಾಮಸ್ಥರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಬಸ್ಸ್ ಬಂದು ನಿಲ್ಲುತ್ತಿದ್ದಂತೆ ಬಾಳೆ ಗಿಡ ಹಾಗೂ ಹೂವಿನ ಮಾಲೆಗಳಿಂದ ಬಸ್ಸನ್ನು ಶೃಂಗಾರ ಮಾಡಿ ಅರ್ಚರ ಮೂಲಕ ಆರತಿ ಬೆಳಗಿ ಪ್ರಾರ್ಥನೆ ಸಲ್ಲಿಸಿ ಸರಕಾರಕ್ಕೆ ಜೈಕಾರ ಹಾಕಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಉದಯ್ ಶೆಟ್ಟಿ ಗ್ರಾಮೀಣ ಪ್ರದೇಶದ ಬಡ ಜನರಿಗೆ ಅನುಕೂಲವಾಗುವಂತೆ ಸ್ಥಳಿಯರ ಮನವಿಯ ಮೇರೆಗೆ ಈ ಯೋಜನೆಯನ್ನು ತರಲಾಗಿದೆ, ಸಾರಿಗೆ ಸಚಿವರ ಸಹಕಾರದಲ್ಲಿ ಇದು ಸಾದ್ಯವಾಯಿತು ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು ಈ ಯೋಜನೆಯನ್ನು ಎಲ್ಲಾ ಗ್ರಾಮಗಳಿಗೂ ವಿಸ್ತರಿಸುವ ಅವಶ್ಯಕತೆ ಇದ್ದೆ ಎಂದರು.
ಬ್ಲಾಕ್ ಅದ್ಯಕ್ಷ ಶುಭದರಾವ್ ಮಾತನಾಡಿ ಕಾರ್ಕಳ ತಾಲೂಕಿನಲ್ಲಿ ಗ್ಯಾರಂಟಿಯ ಎಲ್ಲಾ ಐದು ಯೋಜನೆಗಳು ತಲುಪಿದ ಮೊದಲ ಗ್ರಾಮ ಪಳ್ಳಿ, ಸರಕಾರ ಈ ಯೋಜನೆಗಳನ್ನು ಪ್ರಾರಂಭಿಸಿದಾಗ ಅವಹೇಳನ ಮಾಡಿದ ಬಿಜೆಪಿ ಮುಖಂಡರು ಈಗ ಬಸ್ಸಿನ ಮುಂಭಾಗದಲ್ಲಿ ನಿಂತು ಪೋಸ್ ಕೊಡುತ್ತಾರೆ ಈ ಯೋಜನೆಯ ಬಗ್ಗೆ ಮಾತನಾಡುವ ಯಾವ ನೈತಿಕತೆಯು ಅವರಿಗಿಲ್ಲ, ಈ ರಸ್ತೆಯಲ್ಲಿ ಬಸ್ಸ್ ಬರಲು ಕಾರಣಕರ್ತರಾದ ಮುಖ್ಯಮಂತ್ರಿಗಳಿಗೆ ಮತ್ತು ಸಚಿವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರೆ.
ಈ ಸಂದರ್ಭದಲ್ಲಿ ಗ್ರಾಮೀಣ ಸಮಿತಿಯ ಅದ್ಯಕ್ಷ ವಿಶ್ವನಾಥ್ ಭಂಡಾರಿ, ತಾ.ಪಂ ಮಾಜಿ ಸದಸ್ಯ ಸುಧಾಕರ್ ಶೆಟ್ಟಿ, ಕಾಂತಿ ಶೆಟ್ಟಿ ಸ್ಥಳಿಯರಾ ಚಂದ್ರಶೇಖರ್ ಶೆಟ್ಟಿ ಸಂತೋಷ್ ಶೆಟ್ಟಿ, ವಿಜಯ್ ಎಂ. ಶೆಟ್ಟಿ, ರಘುನಾಥ್ ಶೆಟ್ಟಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.