ಉಡುಪಿ: ಧಾರಾಕಾರ ಸುರಿದ ಮಳೆಗೆ ಉಡುಪಿ ನಗರದ ವಿವಿಧೆಡೆ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಕಲ್ಸಂಕ ಸಮೀಪದ ಬೈಲಕೆರೆಯ ನಾಲ್ಕು ಮನೆಗಳಿಗೆ ನೆರೆ ನೀರು ನುಗ್ಗಿದ್ದು, ಅಲ್ಲಿನ ನಿವಾಸಿಗಳನ್ನು ಅಗ್ನಿಶಾಮಕ ದಳದವರು ಬುಧವಾರ ರಾತ್ರಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.
ಉಡುಪಿ-ಮಲ್ಪೆ ಮುಖ್ಯ ರಸ್ತೆಯ ಆದಿ ಉಡುಪಿಗೆ ಸಮೀಪ ಒಂದು ಮರ ಐದು ವಿದ್ಯುತ್ ಕಂಬಗಳು ಧರೆಗುರುಳಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಡಕುಂಟಾಗಿತ್ತು.