Wednesday, January 15, 2025
Homeಉಡುಪಿಉಡುಪಿ : ಯಕ್ಷಗಾನ ಕಲಾರಂಗ ; ವಿದ್ಯಾಪೋಷಕ್ 59 ಮನೆ ಹಸ್ತಾಂತರ

ಉಡುಪಿ : ಯಕ್ಷಗಾನ ಕಲಾರಂಗ ; ವಿದ್ಯಾಪೋಷಕ್ 59 ಮನೆ ಹಸ್ತಾಂತರ

ಉಡುಪಿ : ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್‍ನ ಪ್ರಥಮ ಪಿಯುಸಿಯ ವಿದ್ಯಾರ್ಥಿ ಸಾತ್ವಿಕ್ ವೈ. ಪೂಜಾರಿ ಇವನಿಗೆ ಉಡುಪಿ ಕಲ್ಯಾಣಪುರದ ಕೆಳನೇಜಾರಿನಲ್ಲಿ ಉಡುಪಿ ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಡಾ. ಹರಿಶ್ಚಂದ್ರ ಇವರು, ಸುಮಾರು ಎರಡೂವರೆ ದಶಕಗಳ ಕಾಲ ತನಗೆ ಆಶ್ರಯ ನೀಡಿ,ಬೆಳೆಸಿದ ಉಡುಪಿಯ “ಮಿತ್ರ ಸಮಾಜ”ದ ಸಂಸ್ಥಾಪಕರಾದ ಕೀರ್ತಿಶೇಷ ಎನ್. ಗೋಪಾಲ ಹೊಳ್ಳ ಮತ್ತು ಅವರ ಧರ್ಮಪತ್ನಿ ಶ್ರೀಮತಿ ಸತ್ಯಭಾಮ ಹೊಳ್ಳ ಇವರ ಗೌರವಾರ್ಥ ನಿರ್ಮಿಸಿದ ನೂತನ ಮನೆ “ಸತ್ಯಸದನ” ಇಂದು (16.12.2024) ಉದ್ಘಾಟನೆಗೊಂಡಿತು. ಡಾ.ಹರಿಶ್ಚಂದ್ರ ಅವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿ, ಯಕ್ಷಗಾನ ಕಲಾರಂಗ ನೀಡಿದ ಅವಕಾಶಕ್ಕೆ ಕೃತಜ್ಞನಾಗಿದ್ದೇನೆ, ಕಲಾರಂಗವು ಸಮಾಜದ ಒಳಿತಿಗೆ ಕೆಲಸಮಾಡುತ್ತಿರುವ ಆದರ್ಶ ಸಂಸ್ಥೆಯಾಗಿದೆ ಎಂದರು. ಈ ಸಂದರ್ಭದಲ್ಲಿ ಅವರ ಪತ್ನಿ ಲಕ್ಷ್ಮಿ ಹರೀಶ್ಚಂದ್ರ, ಮಗಳು ಡಾ. ಪಂಚಮಿ,ರಶ್ಮಿ ಶ್ರೀಧರ ಹೊಳ್ಳ,ಹಯವದನ ಭಟ್,ಪಂಚಾಯತ್ ಅಧ್ಯಕ್ಷ ನಾಗರಾಜ ಕುಂದರ್, ಸಂಸ್ಥೆಯ ಉಪಾಧ್ಯಕ್ಷರುಗಳಾದ ಎಸ್. ವಿ. ಭಟ್, ವಿ. ಜಿ. ಶೆಟ್ಟಿ,ಕೋಶಾಧಿಕಾರಿ ಕೆ.ಸದಾಶಿವ ರಾವ್, ಯಕ್ಷಗಾನ ಕಲಾರಂಗದ ಸದಸ್ಯರುಗಳಾದ ಯು.ವಿಶ್ವನಾಥ್ ಶೆಣೈ,ಯು.ಆರ್.ರಾಜಗೋಪಾಲ ಆಚಾರ್ಯ, ಬಿ.ಭುವನಪ್ರಸಾದ ಹೆಗ್ಡೆ, ಅನಂತರಾಜ ಉಪಾಧ್ಯ,ಕೆ.ಅಜಿತ್ ಕುಮಾರ್, ಗಣೇಶ್ ಬ್ರಹ್ಮಾವರ ಭಾಗವಹಿಸಿದ್ದರು. ಈ ವರ್ಷದ ಪಬ್ಲಿಕ್ ಪರೀಕ್ಷೆಯಲ್ಲಿ ಸಾತ್ವಿಕ್,ಟಿ.ಎಮ್.ಎ. ಪೈ ಪ್ರೌಢಶಾಲೆಗೆ ಪ್ರಥಮ ಸ್ಥಾನಿಯಿಗಿದ್ದು, ಶಾಲಾ ಮುಖ್ಯಶಿಕ್ಷಕ ಎಚ್.ಎನ್. ವೆಂಕಟೇಶ್ ಮತ್ತು ಅಧ್ಯಾಪಕ ವೃಂದ ಉಪಸ್ಥಿತರಿದ್ದರು.ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.  ನಾರಾಯಣ ಎಮ್.ಹೆಗಡೆ ವಂದಿಸಿದರು. ಯಕ್ಷಗಾನ ಕಲಾರಂಗವು ದಾನಿಗಳ ನೆರವಿನಿಂದ ನಿರ್ಮಿಸಿದ 59ನೆಯಮನೆಯಿದು.ಪಂಚಮಿ ಟ್ರಸ್ಟ್ ಪ್ರಾಯೋಜಕತ್ವದ 3 ನೇ ಮನೆಯಾಗಿದೆ.

RELATED ARTICLES
- Advertisment -
Google search engine

Most Popular