Monday, January 20, 2025
Homeಉಡುಪಿಉದ್ಯಾವರ ಅಯ್ಯಪ್ಪ ಭಕ್ತ ಸೇವಾ ಸಮಿತಿ: ಎ. 20-24 ರ ವರೆಗೆ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ

ಉದ್ಯಾವರ ಅಯ್ಯಪ್ಪ ಭಕ್ತ ಸೇವಾ ಸಮಿತಿ: ಎ. 20-24 ರ ವರೆಗೆ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ

ಉಡುಪಿ: ಉದ್ಯಾವರ ಗಣಪತಿ ದೇವಸ್ಥಾನ ಬಳಿಯ ಸಾರ್ವಜನಿಕ ಶ್ರೀ ಅಯ್ಯಪ್ಪ ಭಕ್ತ ಸೇವಾ ಸಮಿತಿ ವತಿಯಿಂದ ನೂತನಾವಗಿ ಪುನಃ ನಿರ್ಮಿಸಿರುವ ಮಂದಿರದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಏ. 20ರಿಂದ 24ರ ತನಕ ನಡೆಯಲಿದೆ.

20ರ ಮಧ್ಯಾಹ್ನ 3ರಿಂದ ಶಂಭುಕಲ್ಲು ಶ್ರೀ ವೀರಭದ್ರ ದುರ್ಗಾಪರಮೇಶ್ವರಿ ಗಣಪತಿ ಮತ್ತು ಮಹಾಕಾಳಿ ಪಂಜುರ್ಲಿ ಸಾನ್ನಿಧ್ಯದಿಂದ ನೂತನ ಮಂದಿರದವರೆಗೆ ಶೋಭಾಯಾತ್ರೆಯಲ್ಲಿ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ದೇವಿಗೆ ಹೊರೆಕಾಣಿಕೆ ಸಮರ್ಪಣೆ, ಎ. 21ರ ಸಂಜೆ 5ರಿಂದ ಪುಣ್ಯಾಹ ವಾಚನ, ಸಪ್ತಶುದ್ಧಿ, ವಾಸ್ತುವಿಧಿ, ರಕ್ಷಾ ಸುದರ್ಶನ ಹೋಮ ಜರಗಲಿದೆ.

ಎ. 22ರ ಬೆಳಗ್ಗೆ 8ರಿಂದ ಗಣಪತಿ ಹೋಮ, ಪ್ರತಿಷ್ಠಾ ಹೋಮ, ಗ್ರಹಶಾಂತಿ, 9.40ಕ್ಕೆ ಶ್ರೀ ದೇವರ ಪ್ರತಿಷ್ಠೆ 11ಕ್ಕೆ ಕಲಶಾಭಿಷೇಕ, ಪ್ರಸನ್ನ ಪೂಜೆ, ಶ್ರೀ ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರಿಂದ ಆಶೀರ್ವಚನ, ಮಧ್ಯಾಹ್ನ ಅನ್ನಸಂತರ್ಪಣೆ, 1ರಿಂದ ಭಜನೆ, ಸಂಜೆ 6ಕ್ಕೆ ರಂಗಪೂಜೆ, ಭಜನೆ, ಬೆಳಗ್ಗೆ ಸೂರ್ಯೋದಯಕ್ಕೆ ನೆರವೇರಲಿದೆ. ಎ. 23 ಮತ್ತು 24ರ ರಾತ್ರಿ 8ರಿಂದ ಸಭೆ ಜರಗಲಿದ್ದು, ಎ. 23 ಮತ್ತು 24ರ ಸಂಜೆ 6.30ರಿಂದ ಸ್ಥಳೀಯ ಮಕ್ಕಳಿಂದ ನೃತ್ಯ, ಎ. 23ರ ರಾತ್ರಿ 9.30ರಿಂದ ಹಾಸ್ಯ ನಾಟಕ, ಎ. 24ರ ರಾತ್ರಿ 9.30ರಿಂದ ತುಳು ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಸಮಿತಿಯ ಪ್ರಕಟನೆ ತಿಳಿಸಿದೆ.

RELATED ARTICLES
- Advertisment -
Google search engine

Most Popular