Monday, July 15, 2024
Homeರಾಜಕೀಯಉದ್ಯಾವರ: ಬಿಜೆಪಿ ಬೆಂಬಲಿತ ಗ್ರಾ. ಪಂ. ಸದಸ್ಯೆ ಸಹಿತ ಕೆಲವರು ಕಾಂಗ್ರೆಸ್ ಸೇರ್ಪಡೆ

ಉದ್ಯಾವರ: ಬಿಜೆಪಿ ಬೆಂಬಲಿತ ಗ್ರಾ. ಪಂ. ಸದಸ್ಯೆ ಸಹಿತ ಕೆಲವರು ಕಾಂಗ್ರೆಸ್ ಸೇರ್ಪಡೆ

ಉದ್ಯಾವರ: ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯೆ ಸೇರಿದಂತೆ ಮೂವರು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ಉದ್ಯಾವರದಲ್ಲಿ ನಡೆದ ಗ್ರಾಮೀಣ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಈ ಸೇರ್ಪಡೆ ನಡೆಯಿತು. ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆದಿದೆ. ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯೆ ಫ್ರೀಡಾ ಡಿಸೋಜ, ಐವನ್ ಡಿಸೋಜ, ರಿಚರ್ಡ್ ಡಿಸೋಜ ಕಾಂಗ್ರೆಸ್ ಸೇರ್ಪಡೆಯಾದರು. ಕಾಪಿ ಬ್ಲಾಕ್ ಕಾಂಗ್ರೆಸ್ ಉತ್ತರ ವಲಯ ಅಧ್ಯಕ್ಷ ಸಂತೋಷ್ ಕುಲಾಲ್, ಕಾರ್ಯಾಧ್ಯಕ್ಷ ಚರಣ್ ವಿಠ್ಠಲ್, ಸಾಮಾಜಿಕ ಮಾಧ್ಯಮ ಉಸ್ತುವಾರಿ ನವೀನ್ ಶೆಟ್ಟಿ, ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರೋಯ್ಸ್ ಫೆರ್ನಾಂಡಿಸ್, ಮುಖಂಡರಾದ ನಾಗೇಶ್ ಕುಮಾರ್, ಶೇಖರ್ ಕೋಟ್ಯಾನ್, ಗಿರೀಶ್ ಕುಮಾರ್, ಹೆಲನ್ ಫೆರ್ನಾಂಡಿಸ್, ಲಾರೆನ್ಸ್ ಡೇಸಾ, ನಿತಿನ್ ಸಾಲ್ಯಾನ್, ದಿವಾಕರ ಬೊಳ್ಜೆ, ಮಧುಲತಾ, ಆಶಾ ಸುರೇಶ್, ಆಶಾ ವಾಸು, ಪೂರ್ಣಿಮಾ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular