ಉದ್ಯಾವರಬೊಳ್ಜೆ ‘ಶ್ರೀ ಲಕ್ಷ್ಮೀ ಆಂಜನೇಯ ಭಜನ (ತಾಲೀಂ) ಮಂಡಳಿ ಡಿ. ಇದರ ಸುವರ್ಣ ಮಹೋತ್ಸವದ ಬಗ್ಗೆ ಭಜನಾ ಮಂದಿರದ ಸಮಗ್ರ ಜೀರ್ಣೋದ್ಧಾರದ ಪ್ರಯುಕ್ತ ನೂತನ ಭಜನಾ ಮಂದಿರ ನಿರ್ಮಾಣದ ಶಿಲಾನ್ಯಾಸ ಹಾಗೂ ಮನವಿ ಪತ್ರ ಬಿಡುಗಡೆ ಸಮಾರಂಭವು ರವಿವಾರ ಜರಗಿತು. ವಿದ್ವಾನ್‌ಕೆ. ಎಸ್ ಕೃಷ್ಣಮೂರ್ತಿ ತಂತ್ರಿ ಕೊರಂಗ್ರಪಾಡಿ ಹಾಗೂ ರಾಜಾರಾಮ ಭಟ್ ಉದ್ಯಾವರ ಅವರು ಶಿಲಾನ್ಯಾಸ ಸಂಬಂಧಿತ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಕಾಪು ಶಾಸಕ ಗುರ್ಮ ಸುರೇಶ್ ಶೆಟ್ಟಿ ಉಡುಪಿ ಶಾಸಕ ಯಶ್ ಪಾಲ್ ವರ್ಣ ಶುಭವನ್ನು ಹಾರೈಸಿದರು. ಉದ್ಯಾವರ ಗ್ರಾ.ಪಂ. ಅಧ್ಯಕ್ಷೆ ಮಾಲತಿ, ಉಪಾಧ್ಯಕ್ಷ ರಾಜೇಶ್ ಕುಂದರ್, ಗ್ರಾ.ಪಂ. ಸದಸ್ಯರಾದ ದಿವಾಕರ ಬೊಳ್ಜೆ ಜಿತೇಂದ್ರ ಶೆಟ್ಟಿ ಉದ್ಯಾವರ, ನಿತಿನ್ ಜಿ. ಸಾಲ್ಯಾನ್, ಶಶಿಕಲಾ ಸುಧಾಕರ್, ಸರೋಜ ಸುಧಾಕರ್, ರಂಗಕರ್ಮಿ ಉದ್ಯಾವರ ನಾಗೇಶ್ ಕುಮಾರ್, ಕೇದಾರ್ ಶ್ರೀ ಬ್ರಹೇಶ್ವರ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸಂತೋಷ್ ಡಿ. ಸುವರ್ಣ, ಪ್ರಮುಖರಾದ ದಿನೇಶ್ ಎಂ ಸಾಲ್ಯಾನ್, ವೇಣುಗೋಪಾಲ್ ವಿ. ಉದಿಯಾವರ, ಭಾಸ್ಕರ ಆಚಾರ್, ಪ್ರತಾಪ್ ಕುಮಾರ್, ಸುಂದರ ಎಸ್. ಕೋಟ್ಯಾನ್ ಕೇದಾರ್, ಪ್ರಕಾಶ್ ಕುಮಾರ್ ಬೊಳ್ಜೆ ಶಿವರಾಮ ಶೆಟ್ಟಿ ಕೇದಾರ್, ವಿನೋದ್ ಕುಮಾರ್ ಮಟ್ಟು ಭಜನಾ ಮಂಡಳಿಯ ಪದಾಧಿಕಾರಿಗಳು, ಸರ್ವ ಸದಸ್ಯರು ಹಾಗೂ ಊರಿನ ಹತ್ತು ಸಮಸ್ತರು ಉಪಸ್ಥಿರಿದ್ದರು. ಭಜನ ಮಂಡಳಿಯ ಅಧ್ಯಕ್ಷ ಶ್ರೀನಿವಾಸ್ ಬೊಳ್ಜೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ವಸಂತ ಕುಮಾರ್ ಬೊಳ್ಜೆ ನಿರೂಪಿಸಿದರು.