ಉಜಿರೆ: ವೇಣೂರು ಬಳಿ ಇರುವ ಬಜಿರೆ ಗ್ರಾಮದ ಹಲ್ಲಂದೋಡಿ ಬಸದಿ ಭಗವಾನ್ ವರ್ಧಮಾನ ಸ್ವಾಮಿ ಸನ್ನಿಧಿಯಲ್ಲಿ ಇದೇ 26 ರಂದು ಭಾನುವಾರ ವಾರ್ಷಿಕ ಪೂಜಾಮಹೋತ್ಸವ ನಡೆಯಲಿದೆ ಎಂದು ಬಸದಿಯ ಬಿ. ಶಶಿಕುಮಾರ್ ಇಂದ್ರ ತಿಳಿಸಿದ್ದಾರೆ.
ಮೂಡಬಿದ್ರೆ ಜೈನಮಠದ ಪೂಜ್ಯ ಚಾರುಕೀರ್ತಿ ಭಟ್ಟಾರಕಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಭಾನುವಾರ ಬೆಳಿಗ್ಯೆ ಏಳು ಗಂಟೆಯಿAದ ವಿಮಾನಶುದ್ಧಿ, ಶಾಂತಿ ಹೋಮದ ಬಳಿಕ 108ಕಲಶ ಅಭಿಷೇಕ ನಡೆಯಲಿದೆ.
ಅಪರಾಹ್ನ ಎರಡು ಗಂಟೆಯಿಂದ ಕಲಿಕುಂಡಯಂತ್ರಾರಾಧನೆ, ಅಷ್ಟಾವಧಾನ ಪೂಜೆ ನಡೆಯಲಿದೆ.
ಸಂಜೆ ಗಂಟೆ 5.30 ರಿಂದ ಪದ್ಮಾವತಿ ಅಮ್ಮನವರಿಗೆ ಲಕ್ಷಹೂವಿನ ಪೂಜೆ ನಡೆಯಲಿದೆ.
ಬಳಿಕ ಮೂಡಬಿದ್ರೆಯ ಪೂಜ್ಯ ಚಾರುಕೀರ್ತಿ ಭಟ್ಟಾರಕಸ್ವಾಮೀಜಿ ಮಂಗಲಪ್ರವಚನ ನೀಡುವರು.