ಉಜಿರೆ: ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಬೆಳ್ತಂಗಡಿ ತಾಲ್ಲೂಕು ಘಟಕದ ಆಶ್ರಯದಲ್ಲಿ ಆಗೋಸ್ತು ೨೦ ರಂದು ಮಂಗಳವಾರ ಉಜಿರೆಯಲ್ಲಿ ಶಾರದಾ ಮಂಟಪದಲ್ಲಿ ಸದಸ್ಯತ್ವ ನೋಂದಣಿ ಮತ್ತು ಪಿಂಚಣಿ ಮಾಹಿತಿ ಸಮಾವೇಶ ನಡೆಯಲಿದ್ದು ಪೂರ್ವಸಿದ್ಧತೆಗಳ ಬಗ್ಯೆ ಸಮಾಲೋಚನಾ ಸಭೆಯು ಶನಿವಾರ ಬೆಳ್ತಂಗಡಿಯಲ್ಲಿ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ. ವಿಠಲ ಶೆಟ್ಟಿ ಸಮಾವೇಶದ ಬಗ್ಯೆ ಸವಿವರ ಮಾಹಿತಿ ನೀಡಿ ವಿವಿಧ ಊರುಗಳಿಗೆ ವಿಭಾಗಸಂಘಟಕರನ್ನು ಆಯ್ಕೆ ಮಾಡಲಾಯಿತು. ಉಜಿರೆ, ಧರ್ಮಸ್ಥಳ, ಬೆಳ್ತಂಗಡಿ, ಮಡಂತ್ಯಾರ್, ನಾರಾವಿ, ನಿಡ್ಲೆ, ಗುರುವಾಯನಕೆರೆ ವಲಯಗಳಿಗೆ ತಲಾ ನಾಲ್ಕು ಮಂದಿಯAತೆ ಸಂಘಟಕರನ್ನು ಆಯ್ಕೆ ಮಾಡಿ ನಿವೃತ್ತರ ಸದಸ್ಯತ್ವ ನೋಂದಣಿಗೆ ಸಹಕರಿಸುವಂತೆ ಕೋರಲಾಯಿತು.
ಸಂಘದ ಕಾರ್ಯದರ್ಶಿ ವಿಶ್ವಾಸ ರಾವ್ ವರದಿ ವಾಚಿಸಿದರು. ವಸಂತ ಸುವರ್ಣ ಪಿಂಚಣಿ ಬಗ್ಯೆ ಮಾಹಿತಿ ನೀಡಿದರು. ಕೋಶಾಧಿಕಾರಿ ಜಗನ್ನಿವಾಸ ರಾವ್ ಲೆಕ್ಕಪತ್ರದ ವಿವರ ನೀಡಿದರು.
ಸನ್ಮತ್ ಕುಮಾರ್ ನಾರಾವಿ ಸ್ವಾಗತಿಸಿದರು. ಕುಸುಮಾವತಿ ಧನ್ಯವಾದವಿತ್ತರು.
ಉಜಿರೆ : ಸದಸ್ಯತ್ವ ನೋಂದಣಿ ಮತ್ತು ಪಿಂಚಣಿ ಮಾಹಿತಿ ಸಮಾವೇಶ : ಸಮಾಲೋಚನಾ ಸಭೆ
RELATED ARTICLES