ಲಕ್ನೊ: ಯುವಕರಲ್ಲಿ ಹೃದಯಾಘಾತದ ಸುದ್ದಿಗಳು ಹೆಚ್ಚುತ್ತಿರುವ ನಡುವೆ ಇದೀಗ ಮಕ್ಕಳಲ್ಲೂ ಇದು ಕಾಣಿಸಿಕೊಳ್ಳತೊಡಗಿದೆ. ಉತ್ತರ ಪ್ರದೇಶದ ಅಮ್ರೋಹದ ಯುಕೆಜಿ ಬಾಲಕಿಯೊಬ್ಬಳು ಹೃದಯಾಘಾತಕ್ಕೆ ಬಲಿಯಗಿದ್ದಾಳೆ. ಶಾಲೆಗೆ ಹೋಗಿದ್ದ ವಿದ್ಯಾರ್ಥಿನಿ ಹಠಾತ್ ಅನಾರೋಗ್ಯಗೊಂಡು, ಹೃದಯಾಘಾತಕ್ಕೀಡಾಗಿದ್ದಾಳೆ.
5 ವರ್ಷದ ಇಫ್ಜತ್ ಜಹಾನ್ ಶನಿವಾರ ಶಾಲೆಗೆ ಹೋಗಿದ್ದರು. ಆದರೆ ಬ್ರೇಕ್ ಸಮಯದಲ್ಲಿ ಆಕೆಗೆ ಅನಾರೋಗ್ಯ ಕಾಡಿತ್ತು. ಬಾಲಕಿ ಕುಸಿದುಬಿದ್ದ ಹಿನ್ನೆಲೆಯಲ್ಲಿ ಶಾಲಾ ಆಡಳಿತ ಮನೆಯವರಿಗೆ ವಿಷಯ ತಿಳಿಸಿತ್ತು. ಶಾಲೆಗೆ ತಕ್ಷಣವೇ ಆಗಮಿಸಿದ ಹೆತ್ತವರು ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅಲ್ಲಿ ಆಕೆ ಚಿಕಿತ್ಸೆಗೆ ಸ್ಪಂದಿಸದೆ ಆಕೆ ಕೊನೆಯುಸಿರೆಳೆದಳು ಎಂದು ತಿಳಿದುಬಂದಿದೆ. ವಿದ್ಯಾರ್ಥಿನಿ ಸಾವಿನಿಂದ ಕುಟುಂಬಿಕರು, ಸ್ಥಳೀಯರು ದುಃಖಿತರಾಗಿದ್ದಾರೆ.