ಬಂಟ್ವಾಳ: ತಾಲ್ಲೂಕಿಗೆ ಸಮೀಪದ ಉಳಾಯಿಬೆಟ್ಟು ಉದ್ಯಮಿ ಪದ್ಮನಾಭ ಕೋಟ್ಯಾನ್ ಇವರ ಮನೆಯಿಂದ ದರೋಡೆಗೀಡಾದ ಚಿನ್ನಾಭರಣ ದೊರಕಿಸಿಕೊಡುವಂತೆ ಆಗ್ರಹಿಸಿ ಜಿಲ್ಲಾ ಮೂತರ್ೆರಾದರರ ಮಹಾಮಂಡಲ ವತಿಯಿಂದ ನಗರ ಪೊಲೀಸ್ ಆಯುಕ್ತರಿಗೆ ಶುಕ್ರವಾರ ಮನವಿ ಸಲ್ಲಿಸಿದರು. ಕಳೆದ ಜೂ. 21ರಂದು 12 ಮಂದಿ ಮುಸುಕುಧಾರಿಗಳು ಉದ್ಯಮಿ ಪದ್ಮನಾಭ ಕೋಟ್ಯಾನ್ ಅವರ ಮನೆಗೆ ನುಗ್ಗಿ ಎಲ್ಲರನ್ನೂ ಕಟ್ಟಿ ಹಾಕಿ ಹಲ್ಲೆ ನಡೆಸಿದ ಬಳಿಕ ನಗದು ಸಹಿತ ಚಿನ್ನಾಭರಣ ದೋಚಿ ಪರಾರಿಯಾಗಿದ್ದು, ಈ ಪೈಕಿ ಕೆಲವು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದು, ಆತನನ್ನು ಕೂಡಲೇ ಬಂಧಿಸಿ ದರೋಡೆಗೀಡಾದ ನಗದು ಸಹಿತ ಚಿನ್ನಾಭರಣ ವಶಪಡಿಸಿಕೊಂಡು ದೊರಕಿಸಿಕೊಡಬೇಕು ಎಂದು ಮಹಾ ಮಂಡಲ ಅಧ್ಯಕ್ಷ ಕೆ.ಸಂಜೀವ ಪೂಜಾರಿ ಮೆಲ್ಕಾರ್ ಆಗ್ರಹಿಸಿದ್ದಾರೆ. ಉಪಾಧ್ಯಕ್ಷ ರಾಜೇಶ್ ಸುವರ್ಣ, ನಿದರ್ೆಶಕರಾದ ಆರ್. ಸಿ. ನಾರಾಯಣ್, ವಿಶ್ವನಾಥ ಬಿ., ವಿಜಯ್ ಕುಮಾರ್ ಸೊರಕೆ , ಗಣೇಶ್ ಮೂಡುಪೆರಾರ, ಶಿವಪ್ಪ ಸುವರ್ಣ, ಸಿಐಒ ಕಿಶೋರ್ ಕುಮಾರ್ ಇದ್ದರು.