ಉಳ್ಳಾಲ: ಯುವಕನೊಬ್ಬ ಮಲಗಿದ್ದಲ್ಲೇ ಹೃದಯಾಘಾತವಾಗಿ ಮೃತಪಟ್ಟ ಘಟನೆ ಉಳ್ಳಾಲ ಕೊಲ್ಯ ಕನೀರುತೋಟದಲ್ಲಿ ನಡೆದಿದೆ. ಕನೀರುತೋಟ ನಿವಾಸಿ 28ರ ಹರೆಯದ ಜಿತೇಶ್ ಮಂಗಳವಾರ ಸಾವನ್ನಪ್ಪಿದ್ದಾರೆ. ಜಿತೇಶ್ ನಿನ್ನೆ ರಾತ್ರಿ ಊಟ ಮುಗಿಸಿ ಮಲಗಿದ್ದರು. ಇಂದು ಬೆಳಿಗ್ಗೆ ಎದ್ದೇಳದ ಕಾರಣ ಮನೆಯವರು ಪರಿಶೀಲಿಸಿದಾಗ ಅವರು ಮೃತಪಟ್ಟಿರುವುದಾಗಿ ಕಂಡುಬಂದಿದೆ. ಮಂಗಳೂರಿನ ಕೆಟಿಎಂ ಶೋರೂಂನಲ್ಲಿ ಜಿತೇಶ್ ಉದ್ಯೋಗದಲ್ಲಿದ್ದರು. ಕೊರೊನಾ ವೇಳೆ ಜಿತೇಶ್ ಪಂಡಿತ್ ಹೌಸ್ ನಿವಾಸಿ ಯುವತಿಯನ್ನು ವಿವಾಹವಾಗಿದ್ದರು. ಮೃತರು ತಂದೆ ತಾಯಿ, ಪತ್ನಿ, ಸಹೋದರ, ಸಹೋದರಿಯನ್ನು ಅಗಲಿದ್ದಾರೆ.