ಕಳೆದ ಐದು ದಿನಗಳ ಹಿಂದೆ ಉಮಾನಾಥ್ ಕೋಟ್ಯಾನ್ ರವರ ಆರೋಗ್ಯದಲ್ಲಿ ಆಚಾನಕ್ ಆಗಿ ಏರುಪೇರಾಗಿತ್ತು, ಪರೀಕ್ಷೆ ಮಾಡಿದಾಗ ಮೂತ್ರಕೋಶದಲ್ಲಿ ಕಲ್ಲಿರುವುದು ಕಂಡುಬಂದಿದೆ ಹಾಗೂ ವೈದ್ಯರು ತಕ್ಷಣವೇ ಆಪರೇಷನ್ ಮಾಡಬೇಕು ಎಂದು ತಿಳಿಸಿದರು. ಹಾಗಾಗಿ ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಈ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಉಮಾನಾಥ್ ಕೋಟ್ಯಾನ್ ವಿರುದ್ದ ಅಪಪ್ರಚಾರ ಮಾಡುತ್ತಿದ್ದಾರೆ. ಇದು ಸತ್ಯಕ್ಕೆ ಅತ್ಯಂತ ದೂರವಾಗಿದ್ದು ಉಮಾನಾಥ್ ಕೋಟ್ಯಾನ್ ಅವರು ಅಂದು, ಇಂದು, ಎಂದೆಂದೂ ಬಿಜೆಪಿ.
ಬಿಜೆಪಿ ಅಭ್ಯರ್ಥಿಯಾದ ಕ್ಯಾಪ್ಟನ್ ಬ್ರಿಜೇಶ್ ಚೌಟರವರ ಪ್ರಚಾರ ಕಾರ್ಯದಲ್ಲಿ ಸೇರಿಕೊಳ್ಳುತ್ತೇನೆ. ನಾವೆಲ್ಲರೂ ಸೇರಿ ಕ್ಯಾಪ್ಟನ್ ಬ್ರಿಜೇಶ್ ಚೌಟರವರನ್ನು ಹೆಚ್ಚಿನ ಅಂತರದಿಂದ ಜಯಶಾಲಿಯಾಗಿಸೋಣ ಎಂದು ತಿಳಿಸಿದರು.