Sunday, February 16, 2025
HomeUncategorized45ಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳ ಹೃದಯರೋಗಗಳ ಅರ್ಥ ಮಾಡಿಕೊಳ್ಳುವಿಕೆ-ಡಾ.ರಮೇಶ್ ಮೆನನ್, ಅಸೋಸಿಯೇಟ್ ಡೈರೆಕ್ಟರ್- ಪರ್ಸನಲ್ ಜಿನೋಮಿಕ್ಸ್...

45ಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳ ಹೃದಯರೋಗಗಳ ಅರ್ಥ ಮಾಡಿಕೊಳ್ಳುವಿಕೆ
-ಡಾ.ರಮೇಶ್ ಮೆನನ್, ಅಸೋಸಿಯೇಟ್ ಡೈರೆಕ್ಟರ್- ಪರ್ಸನಲ್ ಜಿನೋಮಿಕ್ಸ್ ಅಂಡ್ ಜಿನೋಮಿಕ್ ಮೆಡಿಸಿನ್, ಮೆಡ್ ಜಿನೋಮ್


ಭಾರತದ ಮೌನ ಸಾಂಕ್ರಾಮಿಕ ಅನುವಂಶಿಕ ಹೃದಯರೋಗಗಳು, ಅದರಲ್ಲಿಯೂ ಮುಖ್ಯವಾಗಿ 45 ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ಉಂಟಾಗುವ ಯುವಜನರ ಹೃದಯ ಸಮಸ್ಯೆಗಳ ಕುರಿತು ಗಮನ ಹರಿಸುವ ಮತ್ತು ಮಾತನಾಡುವುದು ಬಹಳ ಮುಖ್ಯವಾಗಿದೆ. ಸಾಂಪ್ರದಾಯಿಕವಾಗಿ ವಯೋವೃದ್ಧರಲ್ಲಿ ಕಾಣಿಸಿಕೊಳ್ಳುವ ಈ ಸಮಸ್ಯೆಗಳು ಈಗ ಮೂವತ್ತು ಹಾಗೂ ನಲ್ವತ್ತರ ಪ್ರಾರಂಭದಲ್ಲಿರುವ ವ್ಯಕ್ತಿಗಳಲ್ಲಿ ಈ ಸಮಸ್ಯೆಗಳು ಹೆಚ್ಚಾಗಿ ಕಾಣುತ್ತಿದ್ದು ಈ ಬದಲಾವಣೆ ನಿಜಕ್ಕೂ ಕಾಳಜಿ ಹುಟ್ಟಿಸುವಂತದ್ದಾಗಿದೆ. ಅತ್ಯಂತ ಸಾಮಾನ್ಯ ಹೃದಯರೋಗ ಎಂದರೆ ಕಾರ್ಡಿಯೋವ್ಯಾಸ್ಕುಲರ್ ಡಿಸೀಸ್ (ಸಿವಿಡಿ) ಆಗಿದ್ದು ಮುಖ್ಯವಾಗಿ ಕೊರೊನರಿ ಆರ್ಟರಿ ಡಿಸೀಸ್ (ಸಿಎಡಿ) ಆಗಿದ್ದು ಇತ್ತೀಚಿನ ದತ್ತಾಂಶದ ಪ್ರಕಾರ ಭಾರತವು ಪ್ರತಿ 100,000 ಜನರಿಗೆ 272 ಮರಣ ಸಿವಿಡಿ ಪ್ರಮಾಣವನ್ನು ಎದುರಿಸುತ್ತಿದ್ದು ಜಾಗತಿಕವಾಗಿ ಇದರ ಪ್ರಮಾಣ 235 ಇದೆ. ಇದಲ್ಲದೆ ವರದಿಗಳ ಪ್ರಕಾರ ಭಾರತದ ಯುವಜನರು ಪಾಶ್ಚಿಮಾತ್ಯದ ದೇಶದ ಜನರಿಗಿಂತ ಒಂದು ದಶಕ ಮುಂಚೆಯೇ ಹೃದಯಸಂಬಂಧಿ ಸಮಸ್ಯೆಗಳನ್ನುಅನುಭವಿಸುತ್ತಿದ್ದಾರೆ. ಈ ಆರೋಗ್ಯದ ಬಿಕ್ಕಟ್ಟುಯುವಜನರಲ್ಲಿ ಅನುವಂಶಿಕ ಹೃದಯರೋಗಗಳಿಗೆ ಗಮನ ನೀಡಬೇಕಾದ, ಪ್ರಾರಂಭಿಕ ರೋಗಪರೀಕ್ಷೆ ಮತ್ತು ಚಿಕಿತ್ಸೆಯ ಮೂಲಕ ಈ ಸಂಭವನೀಯ ಜೀವಕಂಟಕ ರೋಗಗಳಿಂದ ಉಂಟಾಗುವ ರಿಸ್ಕ್ ಗಳನ್ನು ಎದುರಿಸಲು ಹೆಚ್ಚು ಒತ್ತು ನೀಡುವ ಅಗತ್ಯ ತೋರುತ್ತಿದೆ.
ಸಿವಿಡಿಗಳಲ್ಲಿ ಸಾಮಾನ್ಯವಾಗಿ ಕಾಣುವಂತೆ ಅಲ್ಲದೆ ಅನುವಂಶಿಕ ಹೃದಯರೋಗ (ಐ.ಎಚ್.ಸಿ.) ಆಗಾಗ್ಗೆ ಜೀವನದಲ್ಲಿ ಕೆಲ ಮುನ್ಸೂಚನೆಗಳನ್ನು ನೀಡುತ್ತದೆ ಮತ್ತು ಅವು ಜೀವಕಂಟಕವಾಗಿರುತ್ತವೆ. ಅದು ಯುವಜನರಲ್ಲಿ ದಿಢೀರ್ ಹೃದಯಾಘಾತ ಒಳಗೊಂಡು ಗಂಭೀರ ಆರೋಗ್ಯದ ಸಮಸ್ಯೆಗಳನ್ನು ಉಂಟು ಮಾಡಬಹುದು. ಕೆಲ ಸಾಮಾನ್ಯ ಐ.ಎಚ್.ಸಿ.ಗಳು ಹೀಗಿವೆ:
• ಹೈಪರ್ ಟ್ರೊಫಿಕ್ ಕಾರ್ಡಿಯೊಮಯೋಪತಿ (ಎಚ್.ಸಿ.ಎಂ): ಹೃದಯದ ಸ್ನಾಯುವಿನ ಅಸಹಜ ದಪ್ಪವಾಗುವುದಾಗಿದ್ದು ಅದು ರಕ್ತದ ಹರಿವಿಗೆ ಅಡ್ಡಿಯುಂಟು ಮಾಡುತ್ತದೆ ಮತ್ತು ಅರ್ರಿದಮಿಯಾಸ್ ಉಂಟು ಮಾಡುತ್ತದೆ.
• ಅರಿದಮೊಜೆನಿಕ್ ರೈಟ್ ವೆಂಟ್ರಿಕ್ಯುಲರ್ ಕಾರ್ಡಿಯೊಮಯೋಪತಿ (ಎ.ಆರ್.ವಿ.ಸಿ.): ಹೃದಯದ ಸ್ನಾಯುವನ್ನು ಕೊಬ್ಬು ಮತ್ತು ಕಲೆಯ ಜೀವಕೋಶ ಬದಲಾಯಿಸಿ ಜೀವಕ್ಕೆ ಕಂಟಕವಾಗುವ ಅರ್ರಿದಮಿಯಾಸ್ ರಿಸ್ಕ್ ಹೆಚ್ಚಿಸುತ್ತದೆ.
• ಡೈಲೇಟೆಡ್ ಕಾರ್ಡಿಯೊಪಯೋಪತಿ (ಡಿಸಿಎಂ): ಒಂದು ಅಥವಾ ಎರಡು ಕುಹರಗಳ ವಿಸ್ತರಣೆ ಮತ್ತು ಹಿಗ್ಗುವಿಕೆಯು ದುರ್ಬಲ ಸಂಕೋಚನಕ್ಕೆ ಕಾರಣವಾಗುತ್ತದೆ, ಇದನ್ನು ಶೇ.40ಕ್ಕಿಂತ ಕಡಿಮೆ ಲೆಫ್ಟ್ ವೆಂಟ್ರಿಕ್ಯುಲರ್ ಎಜೆಕ್ಷನ್ ಫ್ರಾಕ್ಷನ್ ಎಂದು ವ್ಯಾಖ್ಯಾನಿಸಲಾಗುತ್ತದೆ.
• ಲಾಗ್ ಕ್ಯೂಟಿ ಸಿಂಡ್ರೋಮ್: ಹೃದಯದ ವಿದ್ಯುತ್ ವ್ಯವಸ್ಥೆಗೆ ಹಾನಿಯುಂಟು ಮಾಡುವ ಮೂಲಕ ತೀವ್ರ ಮತ್ತು ಅನಿಯಮಿತ ಹೃದಯಬಡಿತಗಳನ್ನು ಉಂಟು ಮಾಡುತ್ತದೆ, ಅದರಿಂದ ಮೂರ್ಛೆ, ಅಸ್ವಸ್ಥತೆ ಅಥವಾ ದಿಢೀರ್ ಮರಣ ಸಂಭವಿಸುತ್ತದೆ.
• ಕೌಟುಂಬಿಕ ಹೈಪರ್ ಕೊಲೆಸ್ಟಿರಿಯೊಲೆಮಿಯಾ: ಅನುವಂಶಿಕ ಸಮಸ್ಯೆಯಾಗಿದ್ದು ಇದು ಹೆಚ್ಚಿನ ಎಲ್.ಡಿ.ಎಲ್. ಕೊಲೆಸ್ಟರಾಲ್ ಮಟ್ಟಕ್ಕೆ ಕಾರಣವಾಗುವ ಮೂಲಕ ಕಿರಿಯ ವಯಸ್ಸಿನಲ್ಲಿ ಹೃದಯರೋಗದ ತೊಂದರೆ ಹೆಚ್ಚಿಸುತ್ತದೆ.
ಹೃದಯ ರೋಗಗಳ ಅನುವಂಶಿಕ ತಳಹದಿ
ಅನುವಂಶಿಕ ಹೃದಯ ರೋಗಗಳ (ಐ.ಎಚ್.ಸಿ.ಗಳು) ವಂಶವಾಹಿ ತಳಹದಿಯನ್ನು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ವರ್ಗಾಯಿಸುವ ಅಪರೂಪದ ಅನುವಂಶಿಕ ರೂಪಾಂತರಗಳು ಅಥವಾ ವಿಶೇಷ ಅನುವಂಶಿಕ ವ್ಯತ್ಯಾಸಗಳು (ಡೆನೊವೊ ವೇರಿಯೆಂಟ್ ಎಂದು ಕರೆಯಲಾಗುತ್ತದೆ) ವ್ಯಕ್ತಿಯಲ್ಲಿ ಕಂಡುಬರುತ್ತಿದ್ದು ಅವು ಹೃದಯದ ರಚನೆ, ಕಾರ್ಯ ಮತ್ತು/ಅಥವಾ ಲಯದಲ್ಲಿ ಗಮನಾರ್ಹ ಪರಿಣಾಮ ಉಂಟು ಮಾಡಬಲ್ಲದು.
ಹಿಂದೆ ನಮೂದಿಸಲಾದಂತೆ ಅತ್ಯಂತ ಸಾಮಾನ್ಯ ಹೃದಯರೋಗವೆಂದರೆ ಸಿಎಡಿ, ಇದರಲ್ಲಿ ಹೃದಯಕ್ಕೆ ರಕ್ತ ಪೂರೈಸುವ ಅಪಧಮನಿಯ ಗೋಡೆಯ ಮೇಲೆ ಬಿಲ್ಲೆಯಂತೆ ಬೆಳೆಯುತ್ತದೆ, ಅದು ಮಯೋಕಾರ್ಡಿಯಲ್ ಇನ್ ಫ್ರಾಕ್ಷನ್ ಅಥವಾ ಹೃದಯಾಘಾತ ಉಂಟು ಮಾಡುತ್ತದೆ. ಸಿಎಡಿಯು ಕುಟುಂಬದ ಹೈಪರ್ ಕೊಲೆಸ್ಟೆರೊಲೆಮಿಯಾದಂತಹ ರೋಗಲಕ್ಷಣಗಳಿಂದ ಉಂಟಾಗಬಹುದಾದರೂ ಸಿಎಡಿಯ ಅನುವಂಶಿಕ ತಳಹದಿಯು ಪಾಲಿಜೆನಿಕ್ ಆಗಿರುತ್ತದೆ. ಹಲವಾರು ಸಾವಿರ ಲಕ್ಷಾಂತರ ಅನುವಂಶಿಕ ಮಾದರಿಗಳು ಒಟ್ಟಾಗಿ ಈ ರೋಗದ ಬೆಳವಣಿಗೆಗೆ ಕೊಡುಗೆ ನೀಡುತ್ತವೆ.
ಜೆನೆಟಿಕ್ ಸ್ಕ್ರೀನ್ ಟೆಸ್ಟ್ ಗಳ ಪಾತ್ರ
ವ್ಯಕ್ತಿಗಳಲ್ಲಿ ಹೃದಯರೋಗಗಳ ತೊಂದರೆಯನ್ನು ಗುರುತಿಸಲು ಜೆನೆಟಿಕ್ ಸ್ಕ್ರೀನಿಂಗ್ ಬಹಳ ಮುಖ್ಯವಾಗಿದ್ದು ರೋಗಪರೀಕ್ಷೆಯ ಫಲಿತಾಂಶವು ಶೇ.40ರವರೆಗೆ ಇರುತ್ತದೆ. ಐ.ಎಚ್.ಸಿ.ಗಳ ಬೆಳವಣಿಗೆಯ ತೊಂದರೆ ಪರೀಕ್ಷಿಸಲು ಅಪರೂಪದ ಜೆನೆಟಿಕ್ ವ್ಯತ್ಯಾಸಗಳ ಉಪಸ್ಥಿತಿ ಕಂಡುಕೊಳ್ಳಲು ಅನುವಂಶಿಕ ರೋಗಪರೀಕ್ಷೆಗಳು ಲಭ್ಯವಿವೆ. ಈ ಸಿಎಡಿ ಬೆಳವಣಿಗೆಯ ತೊಂದರೆ ಕಂಡುಕೊಳ್ಳಲು ಈ ಜೆನೆಟಿಕ್ ಸ್ಕ್ರೀನಿಂಗ್ ಅನ್ನು ಪಾಲಿಜೆನಿಕ್ ಮಾದರಿಗಳನ್ನು ಬಳಸಿ ನಡೆಸಲಾಗುತ್ತದೆ. ಈ ರೋಗತಡೆಯ ಪರೀಕ್ಷೆಗಳು ಅನುವಂಶಿಕ ಪ್ರವೃತ್ತಿಗಳು ಮತ್ತು ಮುಖ್ಯವಾಗಿ ಹೃದಯರೋಗದ ಕೌಟುಂಬಿಕ ಇತಿಹಾಸವುಳ್ಳವರಲ್ಲಿ ರಿಸ್ಕ್ ಹೊಂದಿರುವ ಅಂಶಗಳನ್ನು ಕಂಡುಕೊಳ್ಳುವಲ್ಲಿ ಬಹಳ ಮುಖ್ಯವಾಗಿವೆ. ಭಾರತದಲ್ಲಿ ಸಿವಿಡಿಗಳು ಗಮನಾರ್ಹ ಪ್ರಮಾಣದ ಮರಣಗಳಿಗೆ ಕಾರಣವಾಗುತ್ತಿದ್ದು ಜೆನೆಟಿಕ್ ಸ್ಕ್ರೀನಿಂಗ್ ಮೂಲಕ ಸಿಎಡಿಯಂತಹ ರೋಗವನ್ನು ಉಂಟು ಮಾಡುವ ನಿರ್ದಿಷ್ಟ ಜೆನೆಟಿಕ್ ರಿಸ್ಕ್ ಅಂಶಗಳನ್ನು ಅನಾವರಣಗೊಳಿಸಬಲ್ಲದು. ಜೆನೆಟಿಕ್ ಸ್ಕ್ರೀನಿಂಗ್ ಪರೀಕ್ಷೆಗಳನ್ನು ಪಾಲಿಜೆನಿಕ್ ರಿಸ್ಕ್ ಸ್ಕೋರ್ ಬಳಸಿ ನಡೆಸಲಾಗುತ್ತದೆ, ಅದು ಸಿಎಡಿಗೆ ವ್ಯಕ್ತಿಯ ಜೆನೆಟಿಕ್ ರಿಸ್ಕ್ ನ ಸಮಗ್ರ ಮೌಲ್ಯಮಾಪನ ನೀಡುತ್ತದೆ, ಇದರಿಂದ ರೋಗಲಕ್ಷಣಗಳು ಬೆಳವಣಿಗೆ ಕಾಣುವ ಮುನ್ನವೇ ಮೌಲ್ಯಯುತ ಒಳನೋಟಗಳನ್ನು ನೀಡುತ್ತದೆ. ಈ ಕ್ರಿಯಾತ್ಮಕ ವಿಧಾನವು ಸಕಾಲಿಕ ಮಧ್ಯಪ್ರವೇಶಗಳು, ಜೀವನಶೈಲಿ ಬದಲಾವಣೆಗಳು ಮತ್ತು ಸತತ ಗಮನಿಸುವಿಕೆ ಸಾಧ್ಯವಾಗಿಸುತ್ತವೆ ಮತ್ತು ತೊಂದರೆಯಲ್ಲಿರುವ ಕುಟುಂಬದ ಸದಸ್ಯರಿಗೆ ರೋಗತಡೆಯ ಕ್ರಮಗಳನ್ನು ಯೋಜಿಸುವಲ್ಲಿ ನೆರವಾಗುತ್ತದೆ.
ನೆಕ್ಸ್ಟ್ ಜನರೇಷನ್ ಸೀಕ್ವೆನ್ಸಿಂಗ್ (ಎನ್.ಜಿ.ಎಸ್.) ಬಳಸಿ ಜೆನೆಟಿಕ್ ಸ್ಕ್ರೀನಿಂಗ್ ತಂತ್ರಜ್ಞಾನಗಳಲ್ಲಿ ಆಗಿರುವ ಇತ್ತೀಚಿನ ಸುಧಾರಣೆಗಳು ಮತ್ತು ರೋಗಪತ್ತೆಯ ನಿಖರತೆ ಮತ್ತು ಹೃದಯರೋಗಗಳ ನಿರ್ವಹಣೆಯನ್ನು ಮತ್ತಷ್ಟು ಹೆಚ್ಚಿಸಿವೆ. ಎನ್.ಜಿ.ಎಸ್. ಆಧರಿತ ಪರೀಕ್ಷೆಗಳು ಸಮಗ್ರವಾದ ಜೆನೆಟಿಕ್ ಪ್ರೊಫೈಲ್ ಗಳನ್ನು ನೀಡುವ ಮೂಲಕ ಆರೋಗ್ಯಸೇವಾ ಪೂರೈಕೆದಾರರಿಗೆ ವೈಯಕ್ತಿಕ ಜೆನೆಟಿಕ್ ಮೇಕಪ್ ಗಳಿಗೆ ಹೊಂದುವಂತೆ ವೈಯಕ್ತಿಕಗೊಳಿಸಿದ ಚಿಕಿತ್ಸೆ ಸೃಷ್ಟಿಸುತ್ತಾರೆ. ಅಂತಹ ಕ್ರಿಯಾತ್ಮಕ ವಿಧಾನವು ರೋಗಿಗಳಿಗೆ ಅವರ ಆರೋಗ್ಯದ ಕುರಿತು ಮಾಹಿತಿಪೂರ್ಣ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವಾಗುವ ಮೂಲಕ ಚಿಕಿತ್ಸೆ ನೀಡುವವರಿಗೆ ಪ್ರಾರಂಭಿಕ ಮಧ್ಯಪ್ರವೇಶಕ್ಕೆ ಮತ್ತು ಒಟ್ಟಾರೆ ಫಲಿತಾಂಶಗಳನ್ನು ಸುಧಾರಿಸಲು ನೆರವಾಗುತ್ತದೆ

RELATED ARTICLES
- Advertisment -
Google search engine

Most Popular