ಶಿರಸಿ ನಗರದ ನಗರಸಭೆ ಮುಂಭಾಗ ವಿಜಯ ಅಟೋಮೋಬೈಲ್ಸ್ ನಲ್ಲಿ ಯುನೈಟೆಡ್ ಟೊಯೊಟಾ ಅವರ ವತಿಯಿಂದ ಆಯೋಜಿಸಲಾದ ಶಿರಸಿ ಗ್ರಾಮೀಣ ಮಹೋತ್ಸವ ಕಾರ್ ಸೇಲ್ ಮೇಳದ ಕಾರ್ಯಕ್ರಮವನ್ನು ಸಂಭ್ರಮದಲ್ಲಿ ನಡೆಯಿತು.
ಶಿರಸಿ ಗ್ರಾಮೀಣ ಮಹೋತ್ಸವ ಅಂಗವಾಗಿ ಸ್ಪಾಟ್ ಬುಕ್ಕಿಂಗ್ ಆಫರ್, ಕಡಿಮೆ ಬಡ್ಡಿ ದರದಲ್ಲಿ ಗ್ರಾಹಕರು ತಮ್ಮ ನೆಚ್ಚಿನ ಕಾರನ್ನು ಖರೀದಿಸಬಹುದು.ಪ್ರತಿ ದಿನ ಬೆಳಿಗ್ಗೆ 9 ರಿಂದ ಸಂಜೆ 6 ರ ವರೆಗೆ ಬುಕ್ಕಿಂಗ್ ಸೌಲಭ್ಯ ಇದೆ.
ಹಳೆ ವಾಹನ ಬದಲಾವಣೆಗೆ ಉತ್ತಮ ಬೆಲೆ ನೀಡಲಾಗುತ್ತದೆ.100% ಆನ್ ರೋಡ್ ಫಂಡಿಂಗ್,ಕಡಿಮೆ ನಗದು ಪಾವತಿ ಜೊತೆಗೆ 0 ಡೌನ್ ಪೇಮೆಂಟ್ ನಲ್ಲಿ ತಮ್ಮ ಕನಸಿನ ಕಾರ್ ಖರೀದಿಸಲು ಅವಕಾಶ GLANZA,TAISOR,
HYRYDER ಕಾರ್ ಮೇಲೆ ಒಂದು ಲಕ್ಷಕ್ಕೂ ಅಧಿಕ ಡಿಸ್ಕೌಂಟ್ ಆಫರ್ ಕೂಡ ಇದೆ. ಶಿರಸಿ ಗ್ರಾಮೀಣ ಮಹೋತ್ಸವ ಶುಭ ಸಂದರ್ಭದಲ್ಲಿ ತಮ್ಮ ನೆಚ್ಚಿನ ಕಾರ್ ನ್ನು ಮನೆಗೆ ಕೊಂಡು ಹೋಗಲು ಯುನಿಟೆಡ್ ಟೊಯೊಟಾ ಸುವರ್ಣಾವಕಾಶವನ್ನು ತಮ್ಮ ಗ್ರಾಹಕರಿಗೆ ಒದಗಿಸಿ ಕೊಟ್ಟಿದೆ.
ಅಶ್ವಿನ್ ಭೀಮಣ್ಣ ನಾಯ್ಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ನಾನು ಸುಮಾರು ವರ್ಷಗಳಿಂದ ಟೊಯೊಟಾ ಕಂಪನಿಯ ಗ್ರಾಹಕನಾಗಿದ್ದು ಇವರ ಸೇವೆ ಉತ್ತಮವಾಗಿದ್ದು. ಈಗ ಕಾರ ಸೇಲ್ ಮಾಡುವುದರ ಜತೆಗೆ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಲು ಸರ್ವಿಸ್ ಸೆಂಟರ್ ಮಾಡಿರುವುದು ಒಳ್ಳೆಯ ವಿಚಾರವಾಗಿದೆ. ಅದನ್ನು ಶಿರಸಿ ತಾಲೂಕಿನ ಸುತ್ತ ಮುತ್ತಲಿನ ಜನತೆ ಸದುಪಯೋಗ ಪಡೆದು ಕೊಳ್ಳಬೇಕೆಂದು ಹೇಳಿದರು.
ಯುನಿಟೆಡ್ ಟೋಯೊಟ ಸೇಲ್ಸ್ ಮೆನೇಜರ್ ಆಶಾ ಭಟ್ ಮಾತನಾಡಿ,ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೆ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಶಿರಸಿ ಗ್ರಾಮೀಣ ಉತ್ಸವವನ್ನು ಆರಂಭಿಸಲಾಗಿದ್ದು 0 ಪೇಮೆಂಟ್ ನಲ್ಲಿ ಕಾರ್ ಖರೀದಿಸ ಬಹುದಾಗಿದ್ದು, ಸ್ಥಳದಲ್ಲೇ ಬುಕಿಂಗ್ ಮಾಡುವ ಕಾರ್ ಗೆ ಆಕರ್ಷಕ ಬಡ್ಡಿದರದಲ್ಲಿ ಫೈನಾನ್ಸ್ ಸೌಲಭ್ಯ ಕೂಡ ಇದೆ.ತಮ್ಮ ಹಳೆ ಕಾರನ್ನು ಉತ್ತಮ ಬೆಲೆಗೆ ಮಾರಾಟ ಮಾಡಿ, ತಮ್ಮ ನೆಚ್ಚಿನ ಕಾರನ್ನು ಖರೀದಿಸಲು ಉತ್ತಮ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಹೇಳಿದರು.
ಸೇಲ್ಸ್ ಮ್ಯಾನೇಜರ್ ಸೋನಿಯಾ ಅವರು ಮಾತನಾಡಿ ಗ್ರಾಹಕರಿಗೆ ಅನುಕೂಲವಾಗುವ ಉದ್ದೇಶದಿಂದ ಶಿರಸಿಯಲ್ಲಿ ನೂತನವಾಗಿ ದೊಡ್ಡ ಮಟ್ಟದ ಸಂಸ್ಥೆಯನ್ನು ಆರಂಭಿಸಿದ್ದೇವೆ ಗ್ರಾಹಕರು ಇದರ ಉಪಯೋಗವನ್ನು ಪಡೆದುಕೊಳ್ಳಿ ಎಂದರು.
ಚುನಾಯಿತ ಗ್ರಾಮ ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷರು ನವೀನ್ ಶೆಟ್ಟಿ
ಮಾತನಾಡಿ
ವಿಶ್ವದಲ್ಲಿ ಭಾರತದಲ್ಲಿ ಜನರ ಮನ ಗೆದ್ದಿರುವ ಯುನಿಟೆಡ್ ಟೋಯೊಟ ಕಂಪನಿ ,ಕಾರ್ ಉದ್ಯಮದಲ್ಲಿ ತನ್ನದೇ ರೀತಿಯಲ್ಲಿ ಕೊಡುಗೆಯನ್ನು ನೀಡಿದೆ.ಈ ಮಹೋತ್ಸವದಿಂದ ಗ್ರಾಹಕರಿಗೆ ತುಂಬಾ ಅನುಕೂಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಯುನೈಟೆಡ್ ಟೊಯೊಟಾ ಕಂಪನಿಯ ಸಿಇಒ ರಮೇಶ್ ಪ್ರಭು, ವಿವೇಕ ಪೂಜಾರಿ, ಉದ್ಯಮಿ ಶ್ರೀಧರ್ ಶೆಟ್ಟಿ,ರಾಜೇಶ್ ಪೂಜಾರಿ ,ಸಂಸ್ಥೆಯ ಸಿಬ್ಬಂದಿಗಳು ಊರಿನ ಗ್ರಾಮಸ್ಥರು ಗ್ರಾಹಕರು ಉಪಸ್ಥಿತರಿದ್ದರು ಮುಂತಾದವರು ಉಪಸ್ಥಿತರಿದ್ದರು.
ಮಾರ್ಕೆಟಿಂಗ್ ಆಫೀಸರ್ ಯಜ್ಞೇಶ್ ದೇವಾಡಿಗ, ಸ್ವಾಗತಿಸಿ ನಿರೂಪಿಸಿದರು ದೀರಜ್, ವಂದಿಸಿದರು.